ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೂಗಲ್, ಸೋನಿ, ವಿಶ್ವದ ಪ್ರತಿಷ್ಠಿತ ಕಂಪೆನಿಗಳು (Google Inc | Sony Corp | Reputed companies)
Bookmark and Share Feedback Print
 
ಇಂಟರ್‌ನೆಟ್ ಸರ್ಚ್ ದೈತ್ಯ ಸಂಸ್ಥೆ ಗೂಗಲ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ ದೈತ್ಯ ಸಂಸ್ಥೆ ಸೋನಿ ಕಂಪೆನಿಗಳಿಗೆ, ಗ್ರಾಹಕರು ಹೆಚ್ಚಿನ ವಿಶ್ವಾಸ ಹಾಗೂ ನಂಬಿಕೆಯನ್ನು ತೋರುತ್ತಾರೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಅಮೆರಿಕ ಮೂಲದ ಸಮೀಕ್ಷಾ ಕಂಪೆನಿ ಅಧ್ಯಯನ ನಡೆಸಿ ವರದಿಯನ್ನು ಬಹಿರಂಗಪಡಿಸಿದ್ದು, ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಗೂಗಲ್ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನವನ್ನು ಸೋನಿ ಕಂಪೆನಿ ಹೊಂದಿದೆ ಎಂದು ತಿಳಿಸಿದೆ.

ಕಂಪೆನಿಗಳ ಬಗ್ಗೆ ಗ್ರಾಹಕರು ಹೊಂದಿರುವ ವಿಶ್ವಾಸ ಮತ್ತು ನಂಬಿಕೆ ಹಾಗೂ ಅನಿಸಿಕೆಗಳನ್ನು ಸಂಗ್ರಹಿಸಿ, ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

ಮನೋರಂಜನಾ ಮತ್ತು ಮಾಧ್ಯಮಗಳ ಸಂಸ್ಥೆಗಳಾದ ವಾಲ್ಟ್‌ ಡಿಸ್ನಿ ಮತ್ತು ಜರ್ಮನಿಯ ಐಷಾರಾಮಿ ಬಿಎಂಡಬ್ಲೂ ಕಾರು ತಯಾರಿಕೆ ಕಂಪೆನಿಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿವೆ. ವಾಹನ ತಯಾರಿಕೆ ಸಂಸ್ಥೆಯಾದ ಮರ್ಸಿಡೆಸ್ ಬೆಂಜ್ ಐದನೇ ಸ್ಥಾನವನ್ನು ಪಡೆದಿದೆ.

ಏಷ್ಯಾ ಖಂಡದಲ್ಲಿ ವಾಲ್ಟ್ ಡಿಸ್ನಿ ಕಂಪೆನಿ ಅಗ್ರಸ್ಥಾನವನ್ನು ಪಡೆದಿದ್ದು,ಮರ್ಸಿಡೆಸ್ ಬೆಂಜ್, ಬಿಎಂಡಬ್ಲೂ, ಸೋನಿ ಮತ್ತು ಸಿಂಗಾಪೂರ್ ಏರ್‌ಲೈನ್ಸ್ ನಂತರದ ಸ್ಥಾನಗಳನ್ನು ಪಡೆದಿವೆ.

ಹೊರತುಪಡಿಸಿ, ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಆಪಲ್ ಆರನೇ ಸ್ಥಾನದಲ್ಲಿದೆ, ನೋಕಿಯಾ(7ನೇ ಸ್ಥಾನ)ಸ್ವಿಡನ್‌ನ ಚಿಲ್ಲರೆ ವಹಿವಾಟು ಸಂಸ್ಥೆ(8ನೇ ಸ್ಥಾನ), ವಾಹನ ತಯಾರಿಕೆ ಸಂಸ್ಥೆ ವೊಕ್ಸ್‌ವಾಗೆನ್ (9ನೇ ಸ್ಥಾನ) ಮತ್ತು ಚಿಪ್ ತಾಯರಿಕೆ ಸಂಸ್ಥೆ ಇಂಟೆಲ್ (10ನೇ ಸ್ಥಾನ)ಪಡೆದಿದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ