ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರ್‌ ಇಂಡಿಯಾ ನೌಕರರರಿಂದ ದಿಡೀರ್ ಮುಷ್ಕರ (Air India| Employees | Flash strike)
Bookmark and Share Feedback Print
 
ಏರ್‌ ಇಂಡಿಯಾ ಅಡಳಿತ ಮಂಡಳಿ ವಾಕ್‌ಸ್ವಾತಂತ್ರಕ್ಕೆ ನಿರ್ಬಂಧ ಹೇರಿರುವ ಆದೇಶವನ್ನು ವಿರೋಧಿಸಿ, ಏರ್‌ ಇಂಡಿಯಾ ನೌಕರರು ದೀಢಿರ್ ಮುಷ್ಕರ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏರ್‌ಇಂಡಿಯಾದ ಇಂಜಿನಿಯರ್‌ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ಕಚೇರಿಯ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗವಹಿಸಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಏರ್‌ಲೈನ್ ಕಾರ್ಯವೈಖರಿ ಕುರಿತಂತೆ ತಮ್ಮ ಅನಿಸಿಕೆಗಳನ್ನು ಸಾರ್ವಜನಿಕವಾಗಿ ಹೇಳಿಕೆ ನೀಡಿದಂತೆ,ಏರ್‌ ಇಂಡಿಯಾ ಅಢಳಿತ ಮಂಡಳಿ ಅಂತರಿಕವಾಗಿ ಸಿಬ್ಬಂದಿಗಳಿಗೆ ನೋಟಿಸ್ ಜಾರಿಮಾಡಿದ್ದರಿಂದ, ಮುಷ್ಕರ ಆರಂಭಿಸಲಾಗಿದೆ ಎಂದು ನೌಕರರ ಮೂಲಗಳು ತಿಳಿಸಿವೆ.

ಏರ್‌ ಇಂಡಿಯಾ ಅಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ ಕೆಲ ಸಂಘಟನೆಗಳ ಪದಾಧಿಕಾರಿಗಳಿಗೆ, ಏರ್‌ ಇಂಡಿಯಾ ಅಡಳಿತ ಮಂಡಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಏರ್‌ಇಂಡಿಯಾದ ಆಲ್-ಇಂಡಿಯಾ ಏರ್‌ಕ್ರಾಫ್ಟ್‌ ಇಂಜಿನಿಯರ್ಸ್ ಅಸೋಸಿಯೇಶನ್ ಸಂಘದ ಪ್ರಧಾನ ಕಾರ್ಯದರ್ಶಿ ವೈ .ವಿ.ರಾಜು ಮಾಧ್ಯಮಗಳೊಂದಿಗೆ ಮಾತನಾಡಿ, ಅನರ್ಹತೆ ಪಡೆದ ಇಂಜಿನಿಯರ್‌ಗೆ ಏರ್‌ಬಸ್ ಏರ್‌ಕ್ರಾಫ್ಟ್‌ಗೆ ದೃಢಿಕರಿಸಲು ನೇಮಕ ಮಾಡಿ ಅಡಳಿತ ಮಂಡಳಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದಲ್ಲಿ 160 ಮಂದಿ ಸಾವನ್ನಪ್ಪಿದ ಘಟನೆಯ ನಂತರ, ರಾಜು ಅವರ ಹೇಳಿಕೆ ಹೊರಬಿದ್ದಿದೆ.

ಏರ್‌ ಇಂಡಿಯಾ ಅಡಳಿತ ಮಂಡಳಿ, ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದನ್ನು ನಿಷೇಧಿಸಿ, ವಾಕ್‌ಸ್ವಾತಂತ್ರಕ್ಕೆ ನಿರ್ಬಂಧ ಹೇರುತ್ತಿದೆ ಎಂದು ಏರ್‌ ಇಂಡಿಯಾ ನೌಕರರು ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏರ್ ಇಂಡಿಯಾ, ಸಿಬ್ಬಂದಿ, ಮುಷ್ಕರ