ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಫೋನ್‌3ಜಿಎಸ್:ವಾಲ್‌ಮಾರ್ಟ್‌ನಿಂದ ಶೇ.50ರಷ್ಟು ದರ ಕಡಿತ (Wal-Mart | iPhone 3GS | Price | New model)
Bookmark and Share Feedback Print
 
ವಾಲ್‌ ಮಾರ್ಟ್‌ ಸಂಸ್ಥೆ ಐಫೋನ್ 3ಜಿಎಸ್‌ ದರದಲ್ಲಿ ಶೇ.50ರಷ್ಟು ಕಡಿತಗೊಳಿಸಲಾಗಿದ್ದು, ಆಪಲ್ ಸಂಸ್ಥೆ ಶೀಘ್ರದಲ್ಲಿ ನೂತನ ಮಾಡೆಲ್ ಐಫೋನ್ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

16 ಗಿಗಾಬೈಟ್‌ಗಳ ಸಾಮರ್ಥ್ಯವನ್ನು ಹೊಂದಿರುವ ಐಫೋನ್3ಜಿಎಸ್‌ ದರವನ್ನು ಪ್ರಸ್ತುತವಿರು 197 ಡಾಲರ್‌ಗಳಿಂದ 97 ಡಾಲರ್‌ಗಳಿಗೆ ಮಂಗಳವಾರದಿಂದ ಇಳಿಕೆ ಮಾಡಲಾಗಿದೆ ಎಂದು ವಾಲ್‌ಮಾರ್ಟ್‌ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಐಫೋನ್ ನೂತನ ಮಾಡೆಲ್‌ಗಳು ಶೀಘ್ರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವು ಸಾಧ್ಯತೆಗಳ ಹಿನ್ನೆಲೆಯಲ್ಲಿ, ವಹಿವಾಟುದಾರರು,ಐಫೋನ್3ಜಿಎಸ್ ಫೋನ್‌ಗಳನ್ನು ಆದಷ್ಟು ವೇಗದಲ್ಲಿ ಮಾರಾಟ ಮಾಡಿ, ನೂತನ ಮಾಡೆಲ್‌ಗಳಿಗೆ ಸ್ಥಳಾವಕಾಶ ಕಲ್ಪಿಸುತ್ತಿದ್ದಾರೆ ಎನ್ನಲಾಗಿದೆ.

ನೂತನ ಐಫೋನ್ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಅಥವಾ 3ಜಿಎಸ್ ದರಗಳಲ್ಲಿ ಕಡಿತ ಮಾಡುವ ಕುರಿತಂತೆ ಹೇಳಿಕೆ ನೀಡಲು ಆಪಲ್ ಸಂಸ್ಥೆ ನಿರಾಕರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ