ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರಿಂಡಿಯಾ ನೌಕರರ ಮುಷ್ಕರ: 76ವಿಮಾನಗಳ ಹಾರಾಟ ರದ್ದು (Air India | Gag order | Strike | Employees | Flights)
Bookmark and Share Feedback Print
 
ವಾಕ್‌ಸ್ವಾತಂತ್ರ್ಯಕ್ಕೆ ನಿರ್ಭಂಧ ಹೇರಿರುವ ಅಡಳಿಯ ಮಂಡಳಿಯ ಧೋರಣೆ ವಿರೋಧಿಸಿ, ಏರ್‌ ಇಂಡಿಯಾ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ, ದೇಶಿಯ ಹಾಗೂ ಅಂತಾರಾಷ್ಟ್ರೀಯ 76 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ.

ದೇಶಿಯ ಹಾರಾಟ ಸೇರಿದಂತೆ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ ಮತ್ತು ಬೆಂಗಳೂರು ನಗರಗಳಿಂದ ವಿದೇಶಿಗಳಿಗೆ ತೆರಳುವ ಒಟ್ಟು 76 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಏರ್‌ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ನೌಕರರ ಸಂಘಗಳ ಸದಸ್ಯರಲ್ಲದ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಏರಿಂಡಿಯಾ ಮೂಲಗಳು ತಿಳಿಸಿವೆ.

ಏರ್‌ಇಂಡಿಯಾ ಅಡಳಿತ ಮಂಡಳಿ, ದೆಹಲಿಯಿಂದ 24 ವಿಮಾನಗಳು, ಮುಂಬೈಯಿಂದ 37, ಕೋಲ್ಕತಾದಿಂದ 6 ಮತ್ತು ಚೆನ್ನೈದಿಂದ 7 ಹಾಗೂ ಬೆಂಗಳೂರಿನಿಂದ 2 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ