ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಈ ಮೊಬೈಲ್ ಸಂಖ್ಯೆ ನಿಮ್ಮ ಹತ್ಯೆಗೆ ಕಾರಣವಾಗಬಹುದು (Bulgarian | Mobile number | Kill you | Sofia)
Bookmark and Share Feedback Print
 
PTI
ಮೊಬೈಲ್ ಖರೀದಿಸುವ ಆಸಕ್ತಿ ಹೊಂದಿದ ಗ್ರಾಹಕರೆ, ತಮ್ಮ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡುವಾಗ ತುಂಬಾ ಎಚ್ಚರದಿಂದ ಆಯ್ಕೆ ಮಾಡುವುದು ಸೂಕ್ತ.

ಬುಲ್‌ಗಾರಿಯಾ ದೇಶದಲ್ಲಿ ಮೊಬೈಲ್ ಸಂಖ್ಯೆ 0888 888 888ಯನ್ನು ಕಳೆದ 10 ವರ್ಷಗಳ ಅವಧಿಯಲ್ಲಿ ಬಳಿಸಿದ ಪ್ರತಿಯೊಬ್ಬ ವ್ಯಕ್ತಿ ಸಾವನ್ನಪ್ಪಿದ್ದರಿಂದ, ಮೊಬೈಲ್ ಸಂಖ್ಯೆಯನ್ನು ರದ್ದುಗೊಳಿಸಲಾಗಿದೆ.ಕೊನೆಯ ಬಾರಿಗೆ ಮೊಬೈಲ್ ಸಂಖ್ಯೆಯನ್ನು ಹೊಂದಿದ ವ್ಯಕ್ತಿಯನ್ನು ನಗರದ ಇಂಡಿಯನ್ ರೆಸ್ಟುರಾಂಟ್‌ ಬಳಿ ಹತ್ಯೆ ಮಾಡಲಾಗಿದೆ.

ಬುಲ್‌ಗಾರಿಯಾದ ಮೊಬೈಲ್ ಫೋನ್ ಕಂಪೆನಿ ಮೊಬಿಟೆಲ್‌ನ ಕಾರ್ಯನಿರ್ವಾಹಕ ಅಧಿಕಾರಿ ವ್ಲಾಡಿಮಿರ್ ಗ್ರಾಶ್ನೊವ್, ಮೊದಲ ಬಾರಿಗೆ ಈ ಸಂಖ್ಯೆಯನ್ನು ಬಳಸಿದ್ದು,48ನೇ ವರ್ಷ ವಯಸ್ಸಿನಲ್ಲಿ 2001ರಲ್ಲಿ ಕ್ಯಾನ್ಸರ್‌ನಿಂದ ಬಳಲಿ ಸಾವನ್ನಪ್ಪಿದ್ದಾರೆ.

ನಂತರ ಈ ಸಂಖ್ಯೆಯನ್ನು ಬುಲ್‌ಗರಿಯಾದ ಮಾಫಿಯಾ ಡಾನ್ ಕೊನ್‌ಸ್ಟಾಂಟಿನ್ ಡಿಮಿಟ್ರೊವ್ ಅವರಿಗೆ ನೀಡಲಾಗಿತ್ತು.31 ವರ್ಷ ವಯಸ್ಸಿನ ಡಿಮಿಟ್ರೊವ್ ಅವರನ್ನು ನೆದರ್‌ಲ್ಯಾಂಡ್‌ನಲ್ಲಿ 2003ರಲ್ಲಿ ಹತ್ಯೆ ಮಾಡಲಾಯಿತು.

ಡಿಮಿಟ್ರೊವ್ ತಮ್ಮ ಮಾಡೆಲ್ ಗೆಳತಿಯೊಂದಿಗೆ ಹೋಟೆಲೊಂದರಲ್ಲಿ ತಿಂಡಿ ಸೇವಿಸುತ್ತಿರುವಾಗ, ಗುಂಡಿನ ದಾಳಿಯಲ್ಲಿ ಮೃತರಾದ ಸಂದರ್ಭದಲ್ಲಿ ಮೊಬೈಲ್ ಅವರೊಂದಿಗಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ.

ನಂತರ ಮೊಬೈಲ್ ಸಂಖ್ಯೆಯನ್ನು ಉದ್ಯಮಿ ಕೊನ್‌ಸ್ಟಾಂಟಿನ್ ಡಿಶ್‌ಲೈವ್ ಅವರಿಗೆ ನೀಡಲಾಗಿತ್ತು. ಅವರು ಕೂಡಾ 2005ರಲ್ಲಿ ಇಂಡಿಯನ್ ರೆಸ್ಟುರಾಂಟ್ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು ಹತ್ಯೆಗೆ ಮುನ್ನ ಕೋಕೇನ್ ಸಾಗಣಿಕೆಯಲ್ಲಿ ತೊಡಗಿದ್ದರು.

ಇದೀಗ ಮೊಬೈಲ್ ಸಂಖ್ಯೆಯನ್ನು ರದ್ದುಗೊಳಿಸಲಾಗಿದೆ. ಈ ಸಂಖ್ಯೆಗೆ ಕರೆ ಮಾಡುವವರಿಗೆ ಕವರೇಜ್ ವ್ಯಾಪ್ತಿಯಿಂದ ಹೊರಗಿದೆ ಎನ್ನುವ ಸಂದೇಶ ರವಾನೆಯಾಗುತ್ತಿದೆ.

ಮೊಬಿಟೆಲ್ ಕಂಪೆನಿಯ ವಕ್ತಾರರು ಮಾತನಾಡಿ, ಮೊಬೈಲ್ ಸಂಖ್ಯೆಯ ಬಗ್ಗೆ ಹೇಳಿಕೆ ನೀಡಲು ಬಯಸುವುದಿಲ್ಲ.ವೈಯಕ್ತಿಕ ಮೊಬೈಲ್ ಸಂಖ್ಯೆಗಳ ಬಗ್ಗೆ ಚರ್ಚಿಸುವುದಿಲ್ಲ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ