ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರ್‌ಇಂಡಿಯಾ ಮುಷ್ಕರ: ಮಾತುಕತೆಗಳು ವಿಫಲ (Air India | Management | Employees unions | Gag order)
Bookmark and Share Feedback Print
 
ಮುಷ್ಕರ ನಿರತ ಏರ್‌ ಇಂಡಿಯಾ ನೌಕರರ ಮತ್ತು ಅಡಳಿತ ಮಂಡಳಿಯ ಮಧ್ಯೆ ನಡೆದ ಮೊದಲ ಸುತ್ತಿನ ಮಾತುಕತೆ ವಿಫಲವಾಗಿದೆ. ನೌಕರರು ಹಾಗೂ ಅಡಳಿತ ಮಂಡಳಿಯ ಅಧಿಕಾರಿಗಳು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಮಾತುಕತೆ ವಿಫಲವಾಗಿದೆ ಎಂದು ಏರ್‌ಇಂಡಿಯಾ ಮೂಲಗಳು ತಿಳಿಸಿವೆ.

ಏರಿಂಡಿಯಾ ನೌಕರರ ಮತ್ತು ಅಡಳಿತ ಮಂಡಳಿಯ ಮಧ್ಯೆ,ಮಾತುಕತೆಗಳು ಫಲಪ್ರದವಾಗದಿರುವುದರಿಂದ,ಚರ್ಚೆ ಮುಂದುವರಿದೆ ಎಂದು ಏರ್‌ಇಂಡಿಯಾ ಮುಖ್ಯಸ್ಥ ಅರವಿಂದ್ ಜಾಧವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏತನ್ಮಧ್ಯೆ, ಏರ್‌ಇಂಡಿಯಾ ಸಂಸ್ಥೆ ಮುಷ್ಕರನಿರತ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಸರಕಾರದಿಂದ ಅನುಮತಿ ಪಡೆದಿದೆ ಎಂದು ಟೆಲಿವಿಜನ್ ಚಾನೆಲ್‌ಗಳು ವರದಿ ಮಾಡಿವೆ.

ಆದಾಗ್ಯೂ, ಏರ್‌ ಇಂಡಿಯಾ ಅಧಿಕಾರಿಗಳು ನೌಕರರನ್ನು ವಜಾಗೊಳಿಸುವ ಸರಕಾರದ ಆದೇಶ ಕುರಿತಂತೆ ಖಚಿತ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ. ಕಳೆದ ರಾತ್ರಿ ಏರ್‌ಇಂಡಿಯಾ ಅಡಳಿತ ಮಂಡಳಿ,ಮುಷ್ಕರವನ್ನು ನಿಲ್ಲಿಸದಿದ್ದಲ್ಲಿ,ಮುಷ್ಕರನಿರತ ನೌಕರರನ್ನು ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.

ವಾಕ್‌ಸ್ವಾತಂತ್ರ್ಯ ನಿರ್ಬಂಧವನ್ನು ಹಿಂದಕ್ಕೆ ಪಡೆದಲ್ಲಿ ಮಾತ್ರ ಮುಷ್ಕರವನ್ನು ಹಿಂಪಡೆಯಲಾಗುವುದು ಎಂದು ಏರ್‌ಇಂಡಿಯಾ ನೌಕರರ ಸಂಘಟನೆಗಳು ಸ್ಪಷ್ಟವಾಗಿ ತಮ್ಮ ಹೇಳಿಕೆಯನ್ನು ನೀಡಿವೆ.

ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಏರ್‌ ಇಂಡಿಯಾ ಸಂಸ್ಥೆ,ಬುಧವಾರದಂದು 76 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದು,ಮುಷ್ಕರ ಎರಡನೇ ದಿನಕ್ಕೆ ಕಾಲಿರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ