ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ಅಮುದು ವಹಿವಾಟಿನಲ್ಲಿ ಶೇ.71ರಷ್ಟು ಏರಿಕೆ (Gold imports | Surge | April | Bombay Bullion Association.)
Bookmark and Share Feedback Print
 
ಚಿನ್ನದ ಅಮುದು ವಹಿವಾಟು ಕಳೆದ ವರ್ಷದ ಏಪ್ರಿಲ್ ತಿಂಗಳ ಅವಧಿಗೆ ಹೋಲಿಸಿದಲ್ಲಿ, ಪ್ರಸಕ್ತ ಏಪ್ರಿಲ್ ತಿಂಗಳ ಅವಧಿಯಲ್ಲಿ ಶೇ.71ರಷ್ಟು ಹೆಚ್ಚಳವಾಗಿ, 34.2ಟನ್‌ಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ, ಕಳೆದ ವರ್ಷದ ಏಪ್ರಿಲ್ ತಿಂಗಳ ಅವಧಿಯಲ್ಲಿ ಕೇವಲ 20 ಟನ್ ಚಿನ್ನವನ್ನು ಅಮುದು ಮಾಡಿಕೊಳ್ಳಲಾಗಿತ್ತು ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಚಿನ್ನದ ದರ ಕಳೆದ ತಿಂಗಳ ಅವಧಿಯಲ್ಲಿ, ಸೀಜನ್ ಹಾಗೂ ಹೂಡಿಕೆದಾರರ ಬೇಡಿಕೆ ಹೆಚ್ಚಳದಿಂದಾಗಿ ಪ್ರತಿ 10ಗ್ರಾಂಗೆ 16,262 ಮತ್ತು 17,140 ರೂಪಾಯಿಗಳಿಗೆ ತಲುಪಿತ್ತು ಎಂದು ತಜ್ಞರು ತಿಳಿಸಿದ್ದಾರೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಏಪ್ರಿಲ್ ತಿಂಗಳ ಅವಧಿಯಲ್ಲಿ, ಪ್ರತಿ ಔನ್ಸ್‌ ಚಿನ್ನದ ದರ ಕನಿಷ್ಠ 1,111 ಡಾಲರ್‌ಗಳಿಂದ ಗರಿಷ್ಠ 1,182 ಡಾಲರ್‌ಗಳಿಗೆ ತಲುಪಿತ್ತು.

ಚಿನ್ನದ ದರದಲ್ಲಿ ಅಲ್ಪ ಇಳಿಕೆಯಾದಲ್ಲಿ ಬೇಡಿಕೆಯಲ್ಲಿ ಹೆಚ್ಚಳವಾಗುತ್ತದೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.

ದೇಶದಲ್ಲಿ ಏಪ್ರಿಲ್‌ನಿಂದ ಜುಲೈವರೆಗೆ ಹಬ್ಬದ ಹಾಗೂ ಸೀಜನ್‌ ಅವಧಿಯಾಗಿದ್ದರಿಂದ, ಚಿನ್ನದ ಖರೀದಿಯಲ್ಲಿ ಏರಿಕೆಯಾಗುತ್ತದೆ.ಹೂಡಿಕೆದಾರರು ಕೂಡಾ ಸುರಕ್ಷಿತ ಠೇವಣಿಯಾದ ಚಿನ್ನವನ್ನು ಖರೀದಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ವರ್ತಕರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ