ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಎಚ್‌ಇಎಲ್‌ಗೆ 1,909 ಕೋಟಿ ರೂಪಾಯಿ ನಿವ್ವಳ ಲಾಭ (BHEL | Fourth quarter | Net profit | Navratna firm)
Bookmark and Share Feedback Print
 
ಸರಕಾರಿ ಸ್ವಾಮ್ಯದ ವಿದ್ಯುತ್ ಉಪಕರಣ ತಯಾರಿಕೆ ಸಂಸ್ಥೆಯಾದ ಬಿಎಚ್‌ಇಎಲ್, ಮಾರ್ಚ್ 2010ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.42ರಷ್ಟು ಹೆಚ್ಚಳವಾಗಿ 1,909 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 1,347.47 ಕೋಟಿ ರೂಪಾಯಿಗಳ ಲಾಭವಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಂಪೆನಿಯ ಜನೆವರಿ-ಮಾರ್ಚ್ ತಿಂಗಳ ಅವಧಿಯಲ್ಲಿ ಒಟ್ಟು ಆದಾಯ 14,152.63 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.ಕಳೆದ ವರ್ಷದ ಅವಧಿಯಲ್ಲಿ 11,047.24 ಕೋಟಿ ರೂಪಾಯಿಗಳಾಗಿತ್ತು ಎಂದು ಬಿಎಚ್‌ಇಎಲ್ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಬಿಎಚ್‌ಇಎಲ್ ಅಡಳಿತ ಮಂಡಳಿ, ತನ್ನ ಶೇರುದಾರರಿಗೆ ಪ್ರತಿ 10 ರೂಪಾಯಿ ಮುಖಬೆಲೆಯ ಶೇರಿಗೆ 12.30 ರೂಪಾಯಿಗಳನ್ನು ಘೋಷಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಬಿಎಚ್‌ಇಎಲ್ ಸಂಸ್ಥೆ, ಆರ್ಥಿಕ ವರ್ಷಾಂತ್ಯಕ್ಕೆ ನಿವ್ವಳ ಲಾಭದಲ್ಲಿ ಶೇ.37ರಷ್ಟು ಏರಿಕೆಯಾಗಿ 4,310.64 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 3,138.21ಕೋಟಿ ರೂಪಾಯಿಗಳಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ