ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಹೀಂದ್ರಾದಿಂದ ರೆವಾ ಕಂಪೆನಿ ಸ್ವಾಧೀನ ಘೋಷಣೆ (Mahindra & Mahindra | REVA | Acquire | Majority stake)
Bookmark and Share Feedback Print
 
ವಾಹನೋದ್ಯಮ ತಯಾರಿಕೆ ಸಂಸ್ಥೆಯಾದ ಮಹೀಂದ್ರಾ ಆಂಡ್ ಮಹೀಂದ್ರಾ, ಎಲೆಕ್ಟ್ರಿಕ್ ಕಾರು ತಯಾರಿಕೆ ರೆವಾ ಕಂಪೆನಿಯ ಶೇ.55.2ರಷ್ಟು ಶೇರುಗಳನ್ನು ಖರೀದಿಸಿರುವುದಾಗಿ ಘೋಷಿಸಿದೆ.

ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ, ಇಂಧನ ಆಧಾರಿತ ಪ್ರಯಾಣಿಕರ ವಾಹನಗಳನ್ನು ತಯಾರಿಸುತ್ತಿದ್ದು, ಇದೀಗ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಸಿದ್ಧತೆ ನಡೆಸುತ್ತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಉಭಯ ಕಂಪೆನಿಗಳು ಬುಧವಾರದಂದು ಒಪ್ಪಂದ ಅಂತ್ಯಗೊಳಿಸಿದ್ದು,ಮಹೀಂದ್ರಾ ಮಹೀಂದ್ರಾ 45 ಕೋಟಿ ರೂಪಾಯಿಗಳನ್ನು ಪಾವತಿಸಿ ಶೇ.55.2ರಷ್ಟು ಶೇರುಗಳನ್ನು ಖರೀದಿಸಿದೆ ಎಂದು ಮಹೀಂದ್ರಾ ವಕ್ತಾರರು ತಿಳಿಸಿದ್ದಾರೆ.

ಬೆಂಗಳೂರು ಮೂಲದ ರೆವಾ ಕಂಪೆನಿಯನ್ನು ಮಹೀಂದ್ರಾ ರೆವಾ ಎಲೆಕ್ಟ್ರಿಕಲ್ ಕಂಪೆನಿ ಲಿಮಿಟೆಡ್ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಪವನ್ ಗೋಯಿಂಕಾ ಹೇಳಿದ್ದಾರೆ.

ರೆವಾ ಕಂಪೆನಿಯ ಉಪಾಧ್ಯಕ್ಷರು ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿಯಾದ ಚೇತನ್ ಮೈನಿ, ಮಹೀಂದ್ರಾ ರೆವಾ ಕಂಪೆನಿಯಲ್ಲಿ ಮುಖ್ಯತಂತ್ರಜ್ಞರಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ