ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೈಕ್ರೋಸಾಫ್ಟ್‌ ಕಂಪೆನಿಯನ್ನು ಹಿಂದಿಕ್ಕಿದ ಆಪಲ್ (Apple | Microsoft | Tech company | Business | IPhone)
Bookmark and Share Feedback Print
 
ಮಾರುಕಟ್ಟೆ ಮೌಲ್ಯದಲ್ಲಿ ಅಂತರ್ಜಾಲ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಕಂಪೆನಿಯಾದ ಮೈಕ್ರೋಸಾಫ್ಟ್‌ ಕಾರ್ಪೋರೇಶನ್‌ ಸಂಸ್ಥೆಯನ್ನು ಆಪಲ್ ಸಂಸ್ಥೆ ಹಿಂದಿಕ್ಕಿದೆ.

ಅಮೆರಿಕದ ಶೇರುಪೇಟೆ ನಾಸ್‌ಡಾಕ್‌ನಲ್ಲಿ ಆಪಲ್ ಸಂಸ್ಥೆಯ ಶೇರುಗಳು ಶೇ.2.8ರಷ್ಟು ಏರಿಕೆ ಕಂಡಿದ್ದು, ಮೈಕ್ರೋಸಾಫ್ಟ್ ಶೇರುಗಳು ಕುಸಿತ ಕಂಡು 229 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ನಾಸ್‌ಡಾಕ್ ಶೇರುಪೇಟೆಯಲ್ಲಿ ಎರಡು ಕಂಪೆನಿಗಳ ಶೇರುಗಳು ಇಳಿಕೆ ಕಂಡಿದ್ದರೂ 222 ಬಿಲಿಯನ್ ಡಾಲರ್‌ಗಳೊಂದಿಗೆ ಆಪಲ್‌ ಸಂಸ್ಥೆ ಚೇತರಿಕೆ ಕಂಡಿತು. ಆದರೆ ಮೈಕ್ರೋಸಾಫ್ಟ್ ಸಂಸ್ಥೆ 219 ಡಾಲರ್‌ಗಳೊಂದಿಗೆ ನಂತರದ ಸ್ಥಾನಪಡೆಯಿತು.

ಆಪಲ್ ಕಂಪೆನಿಯ ಶೇರುಗಳು ಕಳೆದ ಹತ್ತು ವರ್ಷಕ್ಕೆ ಹೋಲಿಸಿದಲ್ಲಿ, ಮೌಲ್ಯದಲ್ಲಿ 10 ಪಟ್ಟು ಹೆಚ್ಚಳವಾಗಿದೆ. ಆಪಲ್ ಸಂಸ್ಥೆ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಆಪೋಡ್, ಐಫೋನ್ ಮತ್ತು ಮ್ಯಾಕ್‌ಬುಕ್ ಲ್ಯಾಪ್‌ಟಾಪ್‌ಗಳ ಭಾರಿ ಬೇಡಿಕೆಯಿಂದಾಗಿ ಕಂಪೆನಿಯ ಆರ್ಥಿಕ ವಹಿವಾಟು ಚೇತರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ