ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾ ಸ್ಟೀಲ್‌ಗೆ 2121 ಕೋಟಿ ರೂ.ನಿವ್ವಳ ನಷ್ಟ (Loss|Tata Group|Tata Steel|Tata Steel Europe)
Bookmark and Share Feedback Print
 
ಯುರೋಪ್ ರಾಷ್ಟ್ರಗಳಲ್ಲಿ ಕುಸಿದ ಬೇಡಿಕೆಯಿಂದಾಗಿ ಟಾಟಾ ಗ್ರೂಪ್‌ ಆಧೀನದ ಟಾಟಾ ಸ್ಟೀಲ್ಸ್‌ಮಾರ್ಚ್ 2010ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ 2,121 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ 2008-09ರ ಆರ್ಥಿಕ ಸಾಲಿನ ಅವಧಿಯಲ್ಲಿ 4,849 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿತ್ತು. ಆದರೆ ಮಾರ್ಚ್ 2010ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕ್ರೂಢೀಕೃತ 2,121ಕೋಟಿ ರೂಪಾಯಿಗಳ ನಷ್ಟವಾಗಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಯುರೋಪ್ ಮಾರುಕಟ್ಟೆಗಳ ಬೇಡಿಕೆ ಕುಸಿತ ಹಾಗೂ ಸ್ಟೀಲ್ ದರಗಳಲ್ಲಿ ಇಳಿಕೆಯಿಂದಾಗಿ, ಒಟ್ಟು ಆದಾಯದಲ್ಲಿ ಶೇ.31ರಷ್ಟು ಕುಸಿತವಾಗಿ, 102.393 ಕೋಟಿ ರೂಪಾಯಿಗಳಿಗೆ ತಲುಪಿದೆ.

ಯುರೋಪ್‌ನ ಟಾಟಾ ಸ್ಟೀಲ್ ಅಧ್ಯಕ್ಷ ಕಿರ್ಬಿ ಆಡಮ್ಸ್ ಮಾತನಾಡಿ, 2009-10ರ ಅವಧಿ ಬೃಹತ್ ಬದಲಾವಣೆಯ, ಆರ್ಥಿಕತೆ ಮರು ಚೇತರಿಕೆಯ ಅವಧಿಯಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ