ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಂಬೈ: 6 ಎಕರೆ ಭೂಮಿ 4000 ಕೋಟಿಗೆ ಖರೀದಿ (Delhi | Mumbai | Gurgaon | Noida | Lodha group | MMRDA)
Bookmark and Share Feedback Print
 
ನಗರದ ದಕ್ಷಿಣ ಭಾಗದಲ್ಲಿರುವ ಆರು ಎಕರೆ ಸರಕಾರಿ ಭೂಮಿಯ ದರ ಬಿಡ್‌‌ನಲ್ಲಿ ಭಾರಿ ಸ್ಪರ್ಧೆ ಏರ್ಪಟ್ಟು, ಲೋಧಾ ಗ್ರೂಪ್‌ 4,053 ಕೋಟಿ ರೂಪಾಯಿಗಳಿಗೆ ಖರೀದಿಸಲು ಮುಂದೆ ಬಂದಿದೆ.

ದೇಶದಲ್ಲಿಯೇ ದಾಖಲೆಯಾಗಿದ್ದಲ್ಲದೇ ಮುಂಬೈನ ಭೂಮಿಯ ದರದ ಮೌಲ್ಯದ ಅರಿವಾಗುತ್ತದೆ. ಮುಂಬೈನಲ್ಲಿ ಇತರ ಜಾಗತಿಕ ನಗರಗಳಿಗೆ ಹೋಲಿಸಿದಲ್ಲಿ, ಕೇವಲ ಪಾರ್ಕ್ ಮತ್ತು ಆಟದ ಮೈದಾನಗಳಂತಹ ಸ್ಥಳಗಳು ಮಾತ್ರ ಖಾಲಿಯಾಗಿ ಉಳಿದಿವೆ. ಮುಂಬೈನ ರಿಯಲ್ ಎಸ್ಟೇಟ್ ಉದ್ಯಮ ವಿಶ್ವದಲ್ಲಿ ಖ್ಯಾತಿ ಪಡೆದಿದೆ

ವಡಾಲಾ ಭೂಮಿಯ ಮೇಲೆ ನಿಯಂತ್ರಣ ಹೊಂದಿರುವ ಮುಂಬೈನ ಮೆಟ್ರೋಪಾಲಿಟನ್ ರಿಜನ್ ಡೆವಲೆಪ್‌ಮೆಂಟ್ ಅಥಾರಿಟಿ, ಬಹುಮಹಡಿ ಕಟ್ಟಡಗಳಿಗೆ ಹಾಗೂ ಗೃಹನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಘೋಷಿಸಿದ ನಂತರ ಭೂಮಿಯ ದರ ಗಗನಕ್ಕೇರಿದೆ.

2008ರಲ್ಲಿ ದೆಹಲಿ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆ ಬಿಪಿಟಿಪಿ, 95 ಎಕರೆ ಭೂಮಿಗಾಗಿ 5000ಕೋಟಿ ರೂಪಾಯಿಗಳನ್ನು ನೀಡಲು ಸಿದ್ಧವಾಗಿತ್ತು. ಆದರೆ ನಂತರ ಬಿಡ್‌ನ್ನು ರದ್ದುಗೊಳಿಸಲಾಗಿತ್ತು. ಕಳೆದ ವರ್ಷ ಗುರ್ಗಾಂವ್‌ನಲ್ಲಿ ಡಿಎಲ್‌ಎಫ್ ಸಂಸ್ಥೆ 1,750 ಕೋಟಿ ರೂಪಾಯಿಗಳನ್ನು ಪಾವತಿಸಿ ಖರೀದಿಸಿರುವುದು ದೇಶದ ಬೃಹತ್ ಬಿಡ್ ಎಂದು ಪರಿಗಣಿಸಲಾಗಿತ್ತು.

ಆದರೆ, ಮಂಗಳವಾರದಂದು ಲೋಧಾ ಗ್ರೂಪ್‌ ವಾಡಾಲಾ ಭೂಮಿಯನ್ನು ಖರೀದಿಸಲು 4000 ಕೋಟಿ ರೂಪಾಯಿಗಳಿಗೆ ಬಿಡ್‌ ಸಲ್ಲಿಸಿದೆ. ಎಂಎಂಆರ್‌ಡಿಎ ಭೂಮಿಗೆ ಕನಿಷ್ಠ ಪ್ರತಿ ಚದರ ಅಡಿಗೆ 40,000 ರೂಪಾಯಿಗಳನ್ನು ಮೀಸಲು ದರವನ್ನು ನಿಗದಿಪಡಿಸಿತ್ತು. ಆದರೆ ಲೋಧಾ ಗ್ರೂಪ್ ಪ್ರತಿ ಚದುರ ಅಡಿಗೆ 91,818 ರೂಪಾಯಿಗಳ ದರವನ್ನು ನೀಡಲು ಸಿದ್ಧವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ