ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾಮೋಟಾರ್ಸ್‌ಗೆ 25.71ಬಿನ್ ರೂ.ನಿವ್ವಳ ಲಾಭ (Tata Motors | Net profit | Jaguar | Land Rover)
Bookmark and Share Feedback Print
 
ದೇಶದ ಬೃಹತ್ ವಾಹನೋದ್ಯಮ ತಯಾರಿಕೆ ಸಂಸ್ಥೆಯಾದ ಟಾಟಾ ಮೋಟಾರ್ಸ್, ಜಾಗ್ವಾರ್ ಮತ್ತು ಲಾಂಡ್ ರೋವರ್ ಕಾರುಗಳ ಮಾರಾಟದಲ್ಲಿ ಹೆಚ್ಚಳದಿಂದಾಗಿ ನಿವ್ವಳ ಲಾಭದಲ್ಲಿ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಕಂಪೆನಿ, ಮಾರ್ಚ್ 2010ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ 544 ಮಿಲಿಯನ್ ಡಾಲರ್ ಕ್ರೂಢೀಕೃತ ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದೆ ಎಂದು ಟಾಟಾ ಮೋಟಾರ್ಸ್ ವಕ್ತಾರರು ತಿಳಿಸಿದ್ದಾರೆ. ಕಳೆದ ವರ್ಷದ ಅವಧಿಯಲ್ಲಿ 25.05 ಬಿಲಿಯನ್ ರೂಪಾಯಿಗಳ ನಷ್ಟವನ್ನು ಕಂಡಿತ್ತು.

ಟಾಟಾ ಉತ್ಪನ್ನಗಳಾದ, ನ್ಯಾನೋ ಕಾರು ಬಸ್ ಟ್ರಕ್‌ಗಳು ಹಾಗೂ ಇಂಗ್ಲೆಂಡ್ ಮೂಲದ ಜಾಗ್ವಾರ್ ಮತ್ತು ಲಾಂಡ್ ರೋವರ್ ಕಾರುಗಳ ಮಾರಾಟದಲ್ಲಿ ಭಾರಿ ಏರಿಕೆಯಾಗಿದ್ದರಿಂದ,ವಾರ್ಷಿಕ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಶೇರುಪೇಟೆಯಲ್ಲಿ ಟಾಟಾ ಮೋಟಾರ್ಸ್ ಶೇರುಗಳು ಶೇ.4.7ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ