ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮಾನತು:ಏರಿಂಡಿಯಾ ನೌಕರರಿಂದ ಮುಷ್ಕರದ ಬೆದರಿಕೆ (Air India | Unions | Strike | Employees | Staff | Airline | ACEU | AIAEA)
Bookmark and Share Feedback Print
 
ಏರ್‌ಇಂಡಿಯಾ ಅಡಳಿತ ಮಂಡಳಿಯ ವಾಗ್ದಂಡನೆ ಆದೇಶವನ್ನು ವಿರೋಧಿಸಿ,ಮುಷ್ಕರದಲ್ಲಿ ಭಾಗಿಯಾಗಿದ್ದ 41 ನೌಕರರನ್ನು ಏರ್ ಇಂಡಿಯಾ ಅಡಳಿತ ಮಂಡಳಿ ಅಮಾನತುಗೊಳಿಸಿರುವುದನ್ನು ಖಂಡಿಸಿ, ನೌಕರರ ಅಮಾನತು ಹಿಂಪಡೆಯದಿದ್ದಲ್ಲಿ ಮತ್ತೊಮ್ಮೆ ಮುಷ್ಕರ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಂಘಟನೆಗಳು ಎಚ್ಚರಿಸಿವೆ.

ಏರಿಂಡಿಯಾ ಅಡಳಿತ ಮಂಡಳಿ 15 ಇಂಜಿನಿಯರ್‌ಗಳು ಸೇರಿದಂತೆ ಒಟ್ಟು 58 ನೌಕರರನ್ನು ಅಮಾನತುಗೊಳಿಸಲಾಗಿದ್ದು, ನೌಕರರ ಸಂಘಟನೆಗಳಾದ ಏರ್ ಕಾರ್ಪೋರೇಶನ್ ಎಂಪ್ಲಾಯಿಸ್ ಯುನಿಯನ್(ಎಸಿಇಯು)ಮತ್ತು ಆಲ್ ಇಂಡಿಯಾ ಏರ್‌ಕ್ರಾಫ್ಟ್‌ ಇಂಜಿನಿಯರ್ಸ್ ಅಸೋಸಿಯೇಶನ್ ಸಂಘಟನೆಗಳ ಮಾನ್ಯತೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.

ಅಮಾನುಗೊಳಿಸಿದ ನೌಕರರನ್ನು ಜೂನ್ 12ರವರೆಗೆ ಸೇವೆಗೆ ಹಿಂಪಡೆಯದಿದ್ದಲ್ಲಿ, ಮತ್ತೊಮ್ಮೆ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಏರ್‌ ಇಂಡಿಯಾ ಅಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.

ಕಳೆದ ರಾತ್ರಿ ಏರ್‌ಇಂಡಿಯಾ ಅಡಳಿತ ಮಂಡಳಿ,ನೌಕರರ ವಜಾ ಹಾಗೂ ಅಮಾನತು ನೋಟಿಸ್‌ಗಳನ್ನು ಜಾರಿ ಮಾಡುವುದರಲ್ಲಿ ನಿರತವಾಗಿದ್ದು, ಎರಡು ನೌಕರರ ಸಂಘಟನೆಗಳ ಕಚೇರಿಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಏರ್‌ಇಂಡಿಯಾ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ