ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚೀನಾದಲ್ಲಿ ವಹಿವಾಟು ವಿಸ್ತರಣೆಗೆ ನಿರ್ಧಾರ: ಟಾಟಾ (Tata Motors | Jaguar Land Rover | China | Business)
Bookmark and Share Feedback Print
 
ದೇಶದ ಬೃಹತ್ ವಾಹನ ತಯಾರಿಕೆ ಕಂಪೆನಿಯಾದ ಟಾಟಾ ಮೋಟಾರ್ಸ್, ಚೀನಾದಲ್ಲಿ ಜಾಗ್ವಾರ್ ಲಾಂಡ್‌ರೋವರ್ ಕಾರುಗಳ ತಯಾರಿಕೆ ಘಟಕವನ್ನು ಆರಂಭಿಸಲು ಯೋಜನೆಯನ್ನು ರೂಪಿಸಿದೆ ಎಂದು ಟಾಟಾ ಮೂಲಗಳು ತಿಳಿಸಿವೆ.

ಚೀನಾದಲ್ಲಿ ಘಟಕವನ್ನು ಆರಂಭಿಸಿ, ಮುಂಬರುವ ವರ್ಷಗಳಲ್ಲಿ ಕಾರು ತಯಾರಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಗ್ರೂಪ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಲ್ ಪೀಟರ್ ಫೊಸ್ಟರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಟಾಟಾ ಮೋಟಾರ್ಸ್‌ಗೆ ಚೀನಾ ಮಹತ್ವದ ಮಾರುಕಟ್ಟೆಯಾಗಿದೆ. ಚೀನಾದಲ್ಲಿ ಜಾಗ್ವಾರ್ ಮಾರಟದಲ್ಲಿ ಶೇ.38ರಷ್ಟು ಹೆಚ್ಚಳವಾಗಿದ್ದು,ಲಾಂಡ್‌ ರೋವರ್ ಕಾರುಗಳ ಮಾರಾಟದಲ್ಲಿ ಶೇ.55ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 32 ಬಿಲಿಯನ್ ಡಾಲರ್ ನಿವ್ವಳ ಲಾಭವಾಗಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆ ಚೇತರಿಕೆಯಾಗುತ್ತಿದ್ದು,ಪ್ರಸ್ತುತ ಪರಿಸರ ವಾಹನೋದ್ಯಮ ಕ್ಷೇತ್ರಕ್ಕೆ ಪೂರಕವಾಗಿದೆ.ವೆಚ್ಚ ಕಡಿತ ಹಾಗೂ ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದರಿಂದ, ಕಂಪೆನಿ ಲಾಭದತ್ತ ಮರಳುತ್ತಿದೆ.

ಟಾಟಾ ಮೋಟಾರ್ಸ್‌ನ ಒಟ್ಟು ವಾಹನಗಳ ಮಾರಾಟ 2009-10ರ ಅವಧಿಯಲ್ಲಿ 1,93,982 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಅವಧಿಯಲ್ಲಿ 1,67,348 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ