ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಪಾನ್:ನಿರುದ್ಯೋಗ ಸಮಸ್ಯೆ ಹೆಚ್ಚಳ, ದರಗಳಲ್ಲಿ ಕುಸಿತ (Japan | Unemployment | Prices fall | Economy)
Bookmark and Share Feedback Print
 
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸತತ ಮೂರನೇ ತಿಂಗಳಲ್ಲಿ ಏರಿಕೆ ಕಂಡಿದ್ದು, ಅಗತ್ಯ ವಸ್ತುಗಳ ದರಗಳಲ್ಲಿ ಇಳಿಕೆಯಾಗುತ್ತಿದೆ.ಗೃಹವೆಚ್ಚದಲ್ಲಿ ಕುಸಿತವಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ದೇಶದ ನಿರುದ್ಯೋಗ ಸಮಸ್ಯೆ ಶೇ.5.1ಕ್ಕೆ ಏರಿಕೆ ಕಂಡಿದ್ದು, ಜನೆವರಿ ತಿಂಗಳ ನಂತರ ಗರಿಷ್ಠ ಏರಿಕೆ ಕಂಡಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.

ಜಪಾನ್‌ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಶೇ.2.9ರಷ್ಟು ಏರಿಕೆ ಕಂಡು 3.56 ಮಿಲಿಯನ್‌ಗಳಿಗೆ ತಲುಪಿದೆ ಎಂದು ಆಂತರಿಕ ವ್ಯವಹಾರಗಳ ಮತ್ತು ಕಮ್ಯೂನಿಕೇಶನ್ಸ್ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಏಪ್ರಿಲ್ ತಿಂಗಳ ಅವಧಿಯಲ್ಲಿ ಗ್ರಾಹಕ ಸೂಚ್ಯಂಕ ದರದಲ್ಲಿ ಏರಿಕೆಯಾಗಿದೆ.ಆದರೆ ಆಹಾರ ದರಗಳಲ್ಲಿ ಶೇ.1.5ರಷ್ಟು ಇಳಿಕೆ ಕಂಡಿದೆ. ಸತತ 14 ನೇ ತಿಂಗಳಿಗೆ ಅಹಾರ ದರಗಳಲ್ಲಿ ನಿರಂತರವಾಗಿ ಇಳಿಮುಖ ಕಾಣುತ್ತಿದೆ.

ವಿಶ್ವದ ಎರಡನೇ ಬೃಹತ್ ಆರ್ಥಿಕ ರಾಷ್ಟ್ರವಾದ ಜಪಾನ್, ರಫ್ತು ವಹಿವಾಟು ಹಾಗೂ ದೇಶಿಯ ಬೇಡಿಕೆಯಲ್ಲಿ ಶೇ.40ರಷ್ಟು ಹೆಚ್ಚಳವಾಗಿದೆ.ಕಳೆದ ಕೆಲ ತಿಂಗಳುಗಳಿಂದ ನಿರುದ್ಯೋಗ ಸಮಸ್ಯೆ ಏರಿಕೆಯತ್ತ ಸಾಗಿದೆ.ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ ಅಂತರಿಕ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ