ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.16.23ಕ್ಕೆ ಇಳಿಕೆ ಕಂಡ ಅಹಾರ ಹಣದುಬ್ಬರ ದರ (Food inflation | Fruits | Vegetable | Prices | Inflation)
Bookmark and Share Feedback Print
 
PTI
ತರಕಾರಿ ಮತ್ತು ಹಣ್ಣುಗಳ ದರಗಳಲ್ಲಿ ಇಳಿಕೆಯಾಗಿದ್ದರಿಂದ, ಅಹಾರ ಹಣದುಬ್ಬರ ದರ ಮೇ.15ಕ್ಕೆ ವಾರಂತ್ಯಗೊಂಡಂತೆ ಶೇ.16.23ಕ್ಕೆ ಇಳಿಕೆ ಕಂಡಿದೆ.

ಕಳೆದ ವಾರ ಶೇ.16.49ರಷ್ಟಿದ್ದ ಅಹಾರ ಹಣದುಬ್ಬರ ದರ, ಪ್ರಸಕ್ತ ವಾರದಲ್ಲಿ ಶೇ.0.26ರಷ್ಟು ಇಳಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಮಸೂರ್ ದರಗಳಲ್ಲಿ ಶೇ.4ರಷ್ಟು ಕುಸಿತ, ತರಕಾರಿ ಮತ್ತು ಹಣ್ಣು ದರಗಳಲ್ಲಿ ಶೇ.2ರಷ್ಟು ಇಳಿಕೆಯಾಗಿದ್ದು,ಸಿರಲ್ಸ್ ಮತ್ತು ದ್ವಿದಳ ಧಾನ್ಯಗಳಲ್ಲಿ ಶೇ.0.20ರಷ್ಟು ಇಳಿಕೆ ಕಂಡಿವೆ.

ಅಹಾರೇತರ ವಸ್ತುಗಳ ದರಗಳು ಕೂಡಾ ಇಳಿಕೆ ಆರಂಭಿಸಿದ್ದು, ಹತ್ತಿ ಶೇ.2ರಷ್ಟು ಕಚ್ಚಾ ರಬ್ಬರ್ ಮತ್ತು ಮಸ್ಟರ್ಡ್ ತಲಾ ಶೇ.1ರಷ್ಟು ಇಳಿಕೆ ಕಂಡಿವೆ.

ಏತನ್ಮದ್ಯೆ, ಟೀ ದರದಲ್ಲಿ ಶೇ.9ರಷ್ಟು ಏರಿಕೆಯಾಗಿದ್ದು,ಮಟನ್ ಶೇ.5ರಷ್ಟು ಮತ್ತು ಉದ್ದು ದರದಲ್ಲಿ ಶೇ.1ರಷ್ಟು ಕುಸಿತವಾಗಿದೆ.

ಒಟ್ಟಾರೆ ಹಣದುಬ್ಬರ ದರ ಮಾರ್ಚ್ ತಿಂಗಳಲ್ಲಿ ಶೇ.9.90ರಷ್ಟಿದ್ದು, ಇದೀಗ ಶೇ.9.59ಕ್ಕೆ ಇಳಿಕೆಯಾಗಿದೆ ಎಂದು ಸರಕಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ