ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ:ಪ್ರತಿ 10 ಗ್ರಾಂಗೆ 18,490 ರೂಪಾಯಿ (Futures trading | Gold prices| Multi Commodity Exchange | Profit selling)
Bookmark and Share Feedback Print
 
ದೇಶಿಯ ಮಾರುಕಟ್ಟೆಗಳಲ್ಲಿ ಚಿನ್ನದ ಗರಿಷ್ಠ ದರ ಏರಿಕೆಯಿಂದಾಗಿ, ಚಿನ್ನದ ಖರೀದಿಯಲ್ಲಿ ಇಳಿಮುಖವಾಗಿ, ಚಿನ್ನದ ದರ ಪ್ರತಿ 10ಗ್ರಾಂಗೆ 108 ರೂಪಾಯಿಗಳ ಇಳಿಕೆ ಕಂಡು 18,490 ರೂಪಾಯಿಗಳಿಗೆ ತಲುಪಿದೆ.

ಮುಂಬೈ ಚಿನಿವಾರಪೇಟೆಯಲ್ಲಿ ಚಿನ್ನದ ದರದಲ್ಲಿ ಶೇ0.58ರಷ್ಟು ಇಳಿಕೆಯಾಗಿ, 18,490 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ವರ್ತಕ ಮೂಲಗಳು ತಿಳಿಸಿವೆ.

ಸಾಗರೋತ್ತರ ಹಾಗೂ ದೇಶಿಯ ಮಾರುಕಟ್ಟೆಗಳಲ್ಲಿ ಚಿನ್ನದ ದರ ದಾಖಲೆಯ ಏರಿಕೆ ಕಂಡಿದ್ದರಿಂದ, ಚಿನ್ನದ ಬೇಡಿಕೆಯಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಹಿಂದಿನ ದಿನದ ವಹಿವಾಟಿನಲ್ಲಿ ಚಿನ್ನದ ದರ ದಾಖಲೆಯ ಏರಿಕೆ ಕಂಡು ಪ್ರತಿ10ಗ್ರಾಗೆ 18,660 ರೂಪಾಯಿಗಳಿಗೆ ತಲುಪಿತ್ತು. ಆದರೆ ಇದೀಗ ಚಿನ್ನದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ ಚಿನ್ನದ ದರದಲ್ಲಿ ಇಳಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ