ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚೀನಾ: ಮುಷ್ಕರದಿಂದ ಹೊಂಡಾ ಕಂಪೆನಿ ಘಟಕಗಳು ಬಂದ್ (Honda | Automobile industry | China | Strike | Wages)
Bookmark and Share Feedback Print
 
ದೇಶದ ಪ್ರಮುಖ ಕಾರು ತಯಾರಿಕೆ ಕಂಪೆನಿಯಾದ ಹೊಂಡಾ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ನಡೆಸುತ್ತಿರುವ ಸಿಬ್ಬಂದಿಗಳ ಮುಷ್ಕರದಿಂದಾಗಿ ನಾಲ್ಕು ಘಟಕಗಳನ್ನು ಮುಚ್ಚಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಚೀನಾದ ಆರ್ಥಿಕತೆಯಲ್ಲಿ ಮಹತ್ತರ ಪಾತ್ರವಹಿಸಿರುವ ವಿದೇಶಿ ಕಂಪೆನಿಗಳಿಗೆ, ಎಚ್ಚರಿಕೆಯ ಗಂಟೆಯಾಗಿದೆ ಎಂದು ವಾಹನೋದ್ಯಮ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ವ್ಯವಸ್ಥೆಯಿಂದ ಬಂಡವಾಳ ವ್ಯವಸ್ಥೆಯತ್ತ ಸಾಗಿದ ಚೀನಾದ ಕಮ್ಯೂನಿಸ್ಟ ಪಕ್ಷ ಸರಕಾರ ಹಾಗೂ ಸೇನಾಪಡೆಗಳ ಮೇಲೆ ಭಾರಿ ನಿಯಂತ್ರಣ ಹೊಂದಿದೆ.ಚೀನಾದಲ್ಲಿ ಮುಷ್ಕರ ಅಸಹನೀಯ ಕಾರ್ಯವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಂಪೆನಿಯ ಸಿಬ್ಬಂದಿಗಳು ತಮ್ಮ ವೇತನವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದು, ಸರಕಾರಿ ಸ್ವಾಮ್ಯದ ಟೆಲಿವಿಜನ್ ಚಾನೆಲ್‌ಗಳು ಹಾಗೂ ಮಾಧ್ಯಮಗಳು ಹೆಚ್ಚಿನ ಆದ್ಯತೆ ನೀಡಿ ಪ್ರಕಟಿಸುತ್ತಿರುವುದು ಹೊಂಡಾ ಕಂಪೆನಿಗೆ ನುಂಗಲಾರದ ತುತ್ತಾಗಿದೆ.

ಹೊಂಡಾ ಕಂಪೆನಿಯ ನಾಲ್ಕು ಘಟಕಗಳಲ್ಲಿ 1,900 ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂದು ಸರಕಾರದ ಅಧಿಕೃತ ಪತ್ರಿಕೆ ಚೀನಾ ಡೈಲಿ ವರದಿ ಮಾಡಿದೆ.

ಸಿಬ್ಬಂದಿಗಳು ಹಾಗೂ ಕಂಪೆನಿಯ ಅಡಲಿತ ಮಂಡಳಿಯ ಮಧ್ಯೆ ಮಾತುಕತೆಗಳು ಆರಂಭವಾಗಿದ್ದು,ಆದರೆ ಭಿನ್ನ ನಿಲುವುಗಳಿಂದಾಗಿ ಸಂಧಾನ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ