ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಆರ್ಥಿಕತೆ ಶೇ.7.9ಕ್ಕೆ ತಲುಪಲಿದೆ:ವಿಶ್ವಸಂಸ್ಥೆ (United Nations | India | Growth | Fiscal | China)
Bookmark and Share Feedback Print
 
ಭಾರತದ ಆರ್ಥಿಕತೆ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಶೇ.7.9ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

2010ರಲ್ಲಿ ವಿಶ್ವದ ಆರ್ಥಿಕತೆ ಶೇ.3ರಷ್ಟು ಏರಿಕೆ ಕಾಣಲಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಶೇ.3.1ಕ್ಕೆ ತಲಪುವ ವಿಶ್ವಾಸವಿದೆ ಎಂದು ವಿಶ್ವದ ಆರ್ಥಿಕ ಸ್ಥಿತಿ ಹಾಗೂ ಅಭಿವೃದ್ಧಿ ವರದಿಯಲ್ಲಿ ವಿಶ್ವಸಂಸ್ಥೆ ಬಹಿರಂಗಪಡಿಸಿದೆ.

ಚೀನಾ ಮತ್ತು ಭಾರತ ದೇಶಗಳು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು,ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಆರ್ಥಿಕ ವೇಗ ನಿಧಾನಗತಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ಭಾರತದ ಆರ್ಥಿಕ ವೃದ್ಧಿ ದರ, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಶೇ.7.9ಕ್ಕೆ ತಲುಪಲಿದ್ದು, ಚೀನಾದ ಆರ್ಥಿಕತೆ ಶೇ,9.2ಕ್ಕೆ ತಲುಪುವ ವಿಶ್ವಾಸವಿದೆ ಎಂದು ಸಮೀಕ್ಷಾ ವರದಿಯಲ್ಲಿ ಪ್ರಕಟಿಸಿದೆ.

ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಒಟ್ಟು ಆರ್ಥಿಕ ಚೇತರಿಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇವಲ ಶೇ.1.9ರಷ್ಟಾಗಲಿದ್ದು, 2011ರಲ್ಲಿ ಶೇ.2.1ಕ್ಕೆ ತಲುಪಲಿದೆ ಎಂದು ವಿಶ್ವಸಂಸ್ಥೆ ಪ್ರಕಟಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ