ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯುರೋಪ್‌ ಬಿಕ್ಕಟಿನಿಂದ ಆದಾಯಕ್ಕೆ ಹೊಡೆತ:ಟಿಸಿಎಸ್ (Europe crisis | Revenue | TCS | United Kingdom | America | Africa)
Bookmark and Share Feedback Print
 
ಯುರೋಪ್‌ನ ಕರೆನ್ಸಿ ಬಿಕ್ಕಟ್ಟು ಪ್ರಸ್ತುತ ವಹಿವಾಟಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.ಆದರೆ ಮುಂಬರುವ ದಿನಗಳಲ್ಲಿ ಆದಾಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ, ಯುರೋ, ಪೌಂಡ್ ಸ್ಟೆರ್ಲಿಂಗ್ ಮೌಲ್ಯಗಳ ಕುಸಿತವಾದಲ್ಲಿ, ಕಳವಳ ಎದುರಾಗುತ್ತದೆ. ಆದರೆ ಡಾಲರ್ ಮೌಲ್ಯದ ಚೇತರಿಕೆಯಿಂದಾಗಿ ಕಡಿಮೆ ಪ್ರಭಾವ ಬೀರಲು ನೆರವಾಗುತ್ತದೆ ಎಂದು ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುರೋಪ್ ಕರೆನ್ಸಿ ಬಿಕ್ಕಟ್ಟಿನಿಂದಾಗಿ ಕಂಪೆನಿಯ ವಹಿವಾಟಿನ ಮೇಲೆ ನೇರ ಪ್ರಭಾವ ಬೀರಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ, ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಹಿಂದಿದ್ದ ಸರಕಾರ ಬದಲಾಗಿ,ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದೆ. ಆದರೆ ಕಂಪೆನಿಗೆ ನೀಡಲಾಗಿರುವ ಎಲ್ಲಾ ಪ್ರೊಜೆಕ್ಟ್‌ಗಳನ್ನು ಪೂರ್ಣಗೊಳಿಸುವಲ್ಲಿ ಕಂಪೆನಿ ನಿರತವಾಗಿದೆ. ಗ್ರಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು,ಯಾವುದೇ ತೊಂದರೆಗಳು ಎದುರಾಗಿಲ್ಲ ಎಂದು ಹೇಳಿದ್ದಾರೆ.

ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌ ಸಂಸ್ಥೆ ವಹಿವಾಟು ವಿಸ್ತರಣೆಗಾಗಿ ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳತ್ತ ಗಮನಹರಿಸಿದೆ. ಅಮೆರಿಕದಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಿವೆ ಎಂದು ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. .
ಸಂಬಂಧಿತ ಮಾಹಿತಿ ಹುಡುಕಿ