ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2 ವರ್ಷದಲ್ಲಿ ಎಲ್ಲ ಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ (Broadband | Panchayat | India | Knowledge Committee | Sam Pitroda)
Bookmark and Share Feedback Print
 
ಇನ್ನೆರಡು ವರ್ಷಗಳೊಳಗೆ ದೇಶದ ಎರಡುವರೆ ಲಕ್ಷದಷ್ಟಿರುವ ಎಲ್ಲ ಪಂಚಾಯತ್‌ಗಳಿಗೆ ಕೂಡ ಬ್ರಾಡ್‌ಬ್ಯಾಂಡ್ ಸಂಪರ್ಕ ದೊರೆಯಲಿದೆ ಎಂದು ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿಟ್ರೋಡಾ ತಿಳಿಸಿದ್ದಾರೆ.

ಈ ಬ್ರಾಡ್‌ಬ್ಯಾಂಡ್ ಸಂಪರ್ಕ ನೀಡಲು 9000 ಕೋಟಿ ರೂ. ಅಗತ್ಯವಿದ್ದು, ಯುನಿವರ್ಸಲ್ ಸರ್ವಿಸ್ ಅಬ್ಲಿಗೇಶನ್ ನಿಧಿಯಿಂದ ಇದು ದೊರೆಯಲಿದೆ ಎಂದು ಪ್ರಧಾನಮಂತ್ರಿಯವರ ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ವಿಭಾಗದ ಸಲಹಾಕಾರರೂ ಆಗಿರುವ ಪಿಟ್ರೋಡಾ ಹೇಳಿದ್ದಾರೆ.

ಭಾರತದಲ್ಲಿ ಸುಮಾರು ಒಂದು ಕೋಟಿ ಬ್ರಾಡ್‌ಬ್ಯಾಂಡ್ ಸಂಪರ್ಕಗಳಿದ್ದು, ಮುಂದಿನ ಐದು ವರ್ಷಗಳಲ್ಲಿ ಈ ಸಂಖ್ಯೆ 10 ಕೋಟಿಗೆ ಏರಲಿದೆ ಎಂದು ವಿಶ್ವಾಸದಿಂದ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ