ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬೆಲೆ ದುಬಾರಿಯಾದರೂ, ಬೇಡಿಕೆ ಕಳೆದುಕೊಳ್ಳದ ಚಿನ್ನ (Gold | Silver | Market)
Bookmark and Share Feedback Print
 
ಭಾರತ ಮತ್ತು ಚೀನಾದಲ್ಲಿ ಚಿನ್ನದ ಆಭರಣಗಳಿಗೆ ನಿರಂತರವಾಗಿ ಬೇಡಿಕೆ ಹೆಚ್ಚುತ್ತಿದ್ದು, ಚಿನ್ನದ ಬೆಲೆ ಏರಿಕೆ ಈ ಬೇಡಿಕೆಗೆ ಯಾವ ರೀತಿಯಿಂದಲೂ ಧಕ್ಕೆ ತಂದಿಲ್ಲ ಎಂದು ಡಬ್ಲ್ಯುಜಿಸಿ ವರದಿ ಹೇಳಿದೆ.

ಒಂದೆಡೆ ಚಿನ್ನದ ಬೆಲೆ ದಿನದಿಂದ ದಿನಕ್ಕೇ ಏರುತ್ತಲೇ ಸಾಗುತ್ತಿದ್ದರೂ, ಚಿನ್ನ ಕೊಳ್ಳುವವರ ಸಂಖ್ಯೆಯಲ್ಲೇನೂ ಕಡಿಮೆಯಾಗಿಲ್ಲ. ಬದಲಾಗಿ ಏರುಗತಿಯತ್ತಲೇ ಸಾಗುತ್ತಿದೆ.

ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶೀ ಚಿನ್ನದ ಬೇಡಿಕೆ ಹೆಚ್ಚಳಗೊಂಡು 193.5 ಟನ್‌ಗಳಷ್ಟಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟಿನ ಫಲವಾಗಿ ಜರ್ಮನಿ ಹಾಗೂ ಸ್ವಿಜರ್‌ಲ್ಯಾಂಡಿನ ಬಂಡವಾಳ ಹೂಡಿಕೆದಾರರೂ ಕೂಡಾ ಚಿನ್ನದತ್ತ ಆಕರ್ಷಿತರಾಗುತ್ತಿದ್ದಾರೆ. ಇದೂ ಕೂಡಾ ಬೇಜಡಿಕೆ ಹೆಚ್ಚಾಗಲು ಕಾರಣ ಎಂದು ಈ ವರದಿ ತಿಳಿಸಿದೆ.

ಈ ವರ್ಷದ ಏಪ್ರಿಲಿನಲ್ಲಿ ಚಿನ್ನದ ಆಮದು ಪ್ರಮಾಣ ಶೇ.71ರಷ್ಟು ಹೆಚ್ಚಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 34.2 ಟನ್‌ಗಳಷ್ಟು ಹೆಚ್ಚಿನ ಚಿನ್ನವನ್ನು ಆಮದುಗೊಳಿಸಲಾಗಿದೆ. ಕಳೆದ ವರ್ಷ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಚಿನ್ನದ ಖರೀದಿಯಲ್ಲಿ ಕುಸಿತ ಕಂಡಿತ್ತಾದರೂ, ಈಗ ಮತ್ತೆ ಬೇಡಿಕೆ ಭಾರೀ ವೃದ್ಧಿಗೊಂಡಿದೆ.

ಏಪ್ರಿಲ್‌ನಿಂದ ಚಿನ್ನದ ಬೆಲೆ ಏರುಗತಿಯಲ್ಲೇ ಸಾಗುತ್ತಿದ್ದು, ಇದೀಗ 10 ಗ್ರಾಂಗಳ ಚಿನ್ನಕ್ಕೆ 18,790 ರೂಪಾಯಿಗಳಿಗೆ ತಲುಪಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನ, ಬೆಳ್ಳಿ, ಮಾರುಕಟ್ಟೆ, ಆಭರಣ