ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇನ್ನು ಎಟಿಎಂ ಮೂಲಕ ಒಂದು ಲಕ್ಷ ರೂ ಡ್ರಾ ಮಾಡೋ ಅವಕಾಶ (ATM | Debit Card | HDFC Bank)
Bookmark and Share Feedback Print
 
ಎಟಿಎಂ ಮೂಲಕ ಶೀಘ್ರದಲ್ಲೇ ನೀವು ನಿಮ್ಮ ಖಾತೆಯಿಂದ ಒಂದು ಲಕ್ಷ ರೂಪಾಯಿಗಳನ್ನೂ ಡ್ರಾ ಮಾಡಬಹುದು. ಅಂತಹ ಸೌಲಭ್ಯವೊಂದನ್ನು ನೀಡುವ ಚಿಂತನೆಯೀಗ ನಡೆಯುತ್ತಿದೆ. ಎಟಿಎಂಗಳ ಮೂಲಕ ದಿನವೊಂದಕ್ಕೆ ಹಣ ಪಡೆಯುವ ಮಿತಿಯನ್ನು ಒಂದು ಲಕ್ಷ ರೂಪಾಯಿಗಳವರೆಗೆ ಶೀಘ್ರದಲ್ಲೇ ವಿಸ್ತರಣೆಯಾಗಲಿದೆ.

ಇಷ್ಟೇ ಅಲ್ಲ, ಡೆಬಿಟ್ ಕಾರ್ಡ್‌ಗಳ ಮೂಲಕ ವಸ್ತುಗಳ ಖರೀದಿ ಮಿತಿಯನ್ನು 1.25 ಲಕ್ಷ ರೂಪಾಯಿಗಳಿಗೆ ಏರಿಸಲಾಗುತ್ತದೆ. ಎಟಿಎಂ ಅಥವಾ ಮೊಬೈಲ್ ಮೂಲಕ ಮತ್ತೊಬ್ಬರ ಖಾತೆಗೆ ಹಣ ವರ್ಗಾಯಿಸುವ ಮಿತಿ ಮೂರು ಲಕ್ಷಕ್ಕೆ ಹೆಚ್ಚಳವಾಗಲಿದೆ. ಹೀಗಾಗಿ ಎಟಿಎಂ ಕಾರ್ಡ್ ಮೂಲಕ ಹಣ ಪಡೆಯುವ ಪಡೆಯುವ ಮಿತಿಯನ್ನು ವಿಸ್ತರಿಸಿರುವುದರಿಂದ ಗ್ರಾಹಕರು ದೊಡ್ಡ ಮೊತ್ತದ ಹಣವನ್ನು ಪಡೆಯಲು ಬ್ಯಾಂಕ್ ಸಾಖೆಗಳಿಗೆ ದೌಡಾಯಿಸುವುದು ತಪ್ಪಿದಂತಾಗಿದೆ.

ಸದ್ಯ ಎಟಿಎಂ ಮೂಲಕ ಹಣ ಪಡೆಯುವ ಮಿತಿ 50 ಸಾವಿರ ರೂಪಾಯಿಗಳವರೆಗಿದೆ. ಈ ಸೌಲಭ್ಯವನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಜೂನ್ 1ರಿಂದಲೇ ಜಾರಿಗೆ ತರಲಿದ್ದು, ಉಳಿದ ಬ್ಯಾಕ್‌ಗಳೂ ಕೂಡಾ ಇದನ್ನು ಆರಂಭಿಸುವ ಚಿಂತನೆ ನಡೆಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ