ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2009-10: ಜಿಡಿಪಿ ದರ ಶೇ.7.4ರಷ್ಟು ಏರಿಕೆ (GDP | Economic Growth | Reccesion)
Bookmark and Share Feedback Print
 
2009-10ನೇ ಸಾಲಿನಲ್ಲಿ ದೇಶದ ಆರ್ಥಿಕ ವೃದ್ಧಿ ದರ ಅರ್ಥಾತ್ ಜಿಡಿಪಿ ಊಹೆಗೂ ಮೀರಿ ಏರಿಕೆಯಾಗಿದ್ದು ಇದು ಶೇ.7.4ರಷ್ಟಾಗಿದೆ.

ಈ ಮೊದಲು ಶೇ.7.2ರಷ್ಟು ಜಿಡಿಪಿ ವೃದ್ಧಿಯಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಈ ಲೆಕ್ಕಾಚಾರ ಹುಸಿಯಾಗಿದ್ದು, ತಯಾರಿಕಾ ರಂಗದಲ್ಲಿನ ಎರಡಂಕಿ ಬೆಳವಣಿಗೆಯ ಫಲವಾಗಿ ದೇಶ ಈ ಬಾರಿ ಶೇ.7.4ರ ಜಿಡಿಪಿ ವೃದ್ಧಿ ದಾಖಲಿಸಿದೆ.

ಆದರೆ ವಿದ್ಯುತ್, ಅನಿಲ ಮತ್ತು ನೀರು ಪೂರೈಕೆ ರಂಗದ ಬೆಳವಣಿಗೆ ಅಂದಾಜಿಗಿಂತ ಕಡಿಮೆಯಾಗಿದ್ದು, ಈ ಬಾರಿ ಶೇ.6.5ರ ಬೆಳವಣಿಗೆ ಕಂಡಿದೆ. ಕೃಷಿ ರಂಗ ಕಳೆದ ಐದು ವರ್ಷಗಳಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ವೃದ್ಧಿ ಕಂಡಿದೆ. ವ್ಯಾಪಕ ಬರಗಾಲದಿಂದ ಕೇವಲ ಶೇ.0.2ರಷ್ಟು ಮಾತ್ರ ವೃದ್ಧಿಯಾಗಿದ್ದರೆ, ಕೃಷಿ ಮತ್ತು ಸಂಬಂಧಿತ ವಲಯಗಳು ಮಾತ್ರ ಶೇ.1.6ರಷ್ಟು ಬೆಳವಣಿಗೆ ಕಂಡಿದೆ.

ಆರ್ಥಿಕ ಹೊಡೆತದಿಂದ ಈಗ ತಾನೇ ಹೊರ ಬರುತ್ತಿರುವ ದೇಶ, ಕೇಂದ್ರ ಸರ್ಕಾರ ಒದಗಿಸಿದ್ದ ಆರ್ಥಿಕ ಉತ್ತೇಜನಾ ಪ್ಯಾಕೇಜುಗಳಿಂದಾಗಿ ಉತ್ತಮ ಫಲ ಕಂಡಿದೆ. ಅಬಕಾರಿ ಸುಂಕ ಹಾಗೂ ಸೇವಾ ತೆರಿಗೆಯಲ್ಲಿ ಮಾಡಿರುವುದು ನಿರೀಕ್ಷಿತ ಪ್ರತಿಫಲ ಒದಗಿಸಿವೆ.

ತಯಾರಿಕಾ ರಂಗದಲ್ಲಿ ಶೇ.16.3ರಷ್ಟು ಏರಿಕೆ ದಾಖಲಿಸಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ವೃದ್ಧಿ ದರ ಶೇ.8.6ರಷ್ಟಾಗಿತ್ತು. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.

ಈ ಹಿಂದೆ 2008-09ರಲ್ಲಿ ಶೇ.6.7ರಷ್ಟು ಜಿಡಿಪಿ ದರ ದಾಖಲಾಗಿತ್ತು. ಅದಕ್ಕೂ ಮೊದಲ ಮೂರು ಹಣಕಾಸು ವರ್ಷಗಳಲ್ಲಿ ಶೇ.9ರಷ್ಟು ಆಸುಪಾಸಿನಲ್ಲಿತ್ತು. 2008ರ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಇದು ತೀವ್ರ ಕುಸಿದಿತ್ತು.
ಸಂಬಂಧಿತ ಮಾಹಿತಿ ಹುಡುಕಿ