ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ತ್ರಿಜಿ ಹಂಚಿಕೆ: ಸರ್ಕಾರದ ಬೊಕ್ಕಸಕ್ಕೆ 67,719 ಕೋಟಿ ರೂ (3G | Vodafone | Bharti Airtel | BSNL)
Bookmark and Share Feedback Print
 
ತ್ರಿಜಿ ತರಂಗಾಂತರ ಹಂಚಿಕೆ ಹರಾಜಿನಲ್ಲಿ ಪಾಲ್ಗೊಂಡಿದ್ದ ಮೊಬೈಲ್ ಸೇವಾ ಸಂಸ್ಥೆಗಳು ಪೂರ್ವ ನಿಗದಿಯಂತೆ ಇದೀಗ ಸೋಮವಾರ ಕೇಂದ್ರ ಸರ್ಕಾರಕ್ಕೆ ಒಟ್ಟು 67,719 ಕೋಟಿ ರೂಪಾಯಿಗಳನ್ನು ಪಾವತಿಸಿವೆ.

ಭಾರತ್ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್), ಮಹಾನಗರ್ ಟೆಲಿಫೋನ್ ನಿಗಮ ನಿಯಮಿತ (ಎಂಟಿಎನ್ಎಲ್), ಭಾರ್ತಿ, ವೋಡಾಫೋನ್ ಮತ್ತು ರಿಲಯನ್ಸ್ ಕಮ್ಯುನಿಕೇಶನ್ಸ್ ಸೇರಿದಂತೆ ಒಟ್ಟು 9 ಮೊಬೈಲ್ ಸೇವಾ ಸಂಸ್ಥೆಗಳು ತಮ್ಮ ತಮ್ಮ ಪಾಲಿನ ಹಣವನ್ನು ಸರ್ಕಾರ್ಕಕೆ ಪಾವತಿಸಿವೆ.

ಭಾರ್ತಿ ಏರ್‌ಟೆಲ್ ತನ್ನ 13 ವೃತ್ತಗಳಿಗಾಗಿ 12,295 ಕೋಟಿ ರೂಪಾಯಿಗಳನ್ನು ನೀಡಿದರೆ, ವೋಡಫೋನ್ 11,618 ಕೋಟಿ ರೂಪಾಯಿಗಳನ್ನು ನೀಡಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ದೆಹಲಿ ಮತ್ತು ಮುಂಬೈ ಹೊರತು ಪಡಿಸಿ ದೇಶದಾದ್ಯಂತ ತ್ರಿಜಿ ಪರವಾನಗಿಗಾಗಿ 10,187 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದೆ. ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ 8,585 ಕೋಟಿ ರೂಪಾಯಿಗಳನ್ನು ನೀಡಿದೆ. ಎಂಟಿಎನ್ಎಲ್ 6,564 ಕೋಟಿ ರೂಪಾಯಿಗಳನ್ನು ಠೇವಣಿ ಇರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ