ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರುತಿ ಸುಝುಕಿ ದಾಖಲೆ: ತಿಂಗಳೊಂದರಲ್ಲೇ ಒಂದು ಲಕ್ಷ ಕಾರು ಮಾರಾಟ (Maruti Suzuki | Car Sale | Ritz | Alto | Wagon-R | Zen, Swift)
Bookmark and Share Feedback Print
 
PTI
ಭಾರತದಲ್ಲಿ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಸಂಸ್ಥೆಯ ಕಾರುಗಳ ಮಾರಾಟ ಮೇ ತಿಂಗಳಲ್ಲಿ ಭರ್ಜರಿ ಏರಿಕೆಯಾಗಿದೆ. ಕಳೆದ ವರ್ಷದ ಇದೇ ತಿಂಗಳಿಗಿಂತ ಶೇ.27.9ರಷ್ಟು ಕಾರು ಮಾರಾಟ ಏರಿಕೆಯಾಗಿದೆ.

ಮೇ ತಿಂಗಳಲ್ಲಿ ಮಾರುತಿ ಸುಝುಕಿ ಸಂಸ್ಥೆಯ 1,02,175 ಕಾರುಗಳು ಮಾರಾಟವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಮಾರಾಟವಾದ ಕಾರುಗಲು 79,872 ಕಾರುಗಳು.

ಫೆಬ್ರವರಿ ತಿಂಗಳಲ್ಲೂ ಮಾರುತಿ ಸುಝುಕಿ ಕಾರುಗಳು ಭರ್ಜರಿ ಮಾರಾಟ ಕಂಡಿತ್ತು. ಆಗ ತಿಂಗಳೊಂದರಲ್ಲೇ 96,650 ಕಾರುಗಳು ಮಾರಾಟವಾಗಿತ್ತು. ಆದರೆ ಈಗ ಮೇ ತಿಂಗಳು ಆ ದಾಖಲೆಯನ್ನು ಮುರಿದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಮೇ ತಿಂಗಳಲ್ಲಿ 90,041 ಕಾರುಗಳು ಮಾರಾಟವಾಗಿದ್ದರೆ, ಸಾಗರೋತ್ತರ ಮಾರುಕಟ್ಟೆಯಲ್ಲಿ 12,134 ಕಾರುಗಳು ಮಾರಾಟ ಕಂಡಿವೆ.

ಆಲ್ಟೋ, ವ್ಯಾಗನಾರ್, ಝೆನ್, ಸ್ವಿಫ್ಟ್ ರಿಟ್ಸ್ ಹಾಗೂ ಎ ಸ್ಟಾರ್ ಕಾರುಗಳ ಮಾರಾಟ ಶೇ.16.6ರಷ್ಟು ಏರಿದ್ದರೆ ಎಸ್‌ಎಕ್ಸ್‌ಫೋರ್ ಮಾರಾಟ ಶೇ.60.5ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ