ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏಪ್ರಿಲ್‌ನಲ್ಲಿ ರಫ್ತು ಪ್ರಮಾಣ ಶೇ.36ರಷ್ಟು ಹೆಚ್ಚಳ (Export | Economic Downturn | Recession | Import)
Bookmark and Share Feedback Print
 
ದೇಶದ ರಫ್ತು ಪ್ರಮಾಣ ಸತತ ಆರು ತಿಂಗಳಿಂದ ಏರಿಕೆ ಕಾಣುತ್ತಿದ್ದು, ಇದೇ ಏಪ್ರಿಲ್ ತಿಂಗಳಲ್ಲಿ ಶೇ.36ರಷ್ಟು ಏರಿಕೆ ಕಂಡಿದೆ.

ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಶೇ.30ರಷ್ಟು ರಫ್ತು ಪ್ರಮಾಣ ಕುಸಿದಿತ್ತು. ಜಾಗತಿಕ ಆರ್ಥಿಕ ಕುಸಿತದ ಪರಿಣಾಮವಾಗಿ ಕಳೆದ ವರ್ಷ ರಫ್ತು ಪ್ರಮಾಣ ಗಣನೀಯವಾಗಿ ಕುಸಿದಿತ್ತು.

ಸದ್ಯ ಯುರೋಪ್ ಮಾರುಕಟ್ಟೆಯಲ್ಲಿನ ಸಾಲದ ಬಿಕ್ಕಟ್ಟು ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿದೆ. ಇದಕ್ಕೆ ಕಾರಣ, ದೇಶದ ರಫ್ತು ವಹಿವಾಟಿನಲ್ಲಿ ಯುರೋಪ್ ಒಕ್ಕೂಟದ ಪಾಲು ಶೇ.20ರಷ್ಟಿದೆ.

ಸತತ 13 ತಿಂಗಳು ಕುಸಿದ ನಂತರ 2009ನೇ ಅಕ್ಟೋಬರ್ ತಿಂಗಳ ನಂತರ ರಫ್ತು ವಲಯದಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡಿತ್ತು. ಇದೇ ವೇಳೆ ಆಮದು ಪ್ರಮಾಣವೂ ಹೆಚ್ಚಾಗಿದ್ದು, ಆಂತರಿಕ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಶೇ.43ರಷ್ಟು ಆಮದು ಪ್ರಮಾಣ ಹೆಚ್ಚಳವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ