ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜೂನ್ 8ರಿಂದ ನೈಸರ್ಗಿಕ ಅನಿಲ ಬೆಲೆ ಏರಿಕೆ (CNG price | piped cooking fuels | LPG)
Bookmark and Share Feedback Print
 
ನೈಸರ್ಗಿಕ ಅನಿಲದ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಇದರ ಫಲವಾಗಿ ಈಗಾಗಲೇ ವಿದ್ಯುತ್ ಹಾಗೂ ರಸಗೊಬ್ಬರ ಉತ್ಪಾದನಾ ಘಟಕಗಳಿಗೆ ಪರಿಷ್ಕೃತ ದರದಲ್ಲಿ ಅನಿಲ ಮಾರಾಟ ಮಾಡಲಾಗುತ್ತಿದೆ.

ನಗರಗಳಲ್ಲಿ ಕೊಳವೆ ಮಾರ್ಗದ ಮೂಲಕ ಪೂರೈಸುವ ಅನಿಲದ ಬೆಲೆ ಜೂ.8ರಿಂದ ಹೆಚ್ಚಳವಾಗಲಿದ್ದು, ಪ್ರತಿ ಯುನಿಟ್‌ಗೆ 16.85ಕ್ಕೆ ಹೆಚ್ಚಿಸಲಾಗಿದೆ. ಕಳೆದ ತಿಂಗಳು ಕೇಂದ್ರ ಸಚಿವ ಸಂಪುಟ ನೈಸರ್ಗಿಕ ಅನಿಲ ಬೆಲೆಯನ್ನು ಪ್ರತಿ ಸಾವಿರ ಯುನಿಟ್‌ಗೆ 3,200 ರೂಪಾಯಿಗಳಿಂದ 6,818ರೂಗಳಿಗೆ ಹೆಚ್ಚಿಸಲು ನಿರ್ಧರಿಸಿತ್ತು. ಹೀಗಾಗಿ ಅನಿಲ ಬಳಸುವ ಕೈಗಾರಿಕೆಗಳಿಗೆ ಖರೀದಿ ಬೆಲೆ ಪ್ರತಿ ಸಾವಿರ ಯುನಿಟ್‌ಗೆ 7,500 ರೂಪಾಯಿಗಳಷ್ಟಾಗಿತ್ತು.

ಇದಲ್ಲದೆ, ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಬೆಲೆ ಪ್ರತಿ ಕೆಜಿಗೆ 5.60 ರೂಪಾಯಿ ಏರಿಕೆಗೊಂಡು 27.50ರಷ್ಟಾಗಿದ್ದು, ಜೂ.8ರಿಂದ ಜಾರಿಗೊಳ್ಳಲಿದೆ. ಅನಿಲ ಉತ್ಪಾದನಾ ಸಂಸ್ಥೆಗಳಾದ ಒಎನ್‌ಜಿಸಿ, ಒಐಎಲ್ ಹಾಗೂ ಅನಿಲ ಮಾರಾಟ ಸಂಸ್ಥೆ ಜಿಎಐಎಲ್‌ಗಳಿಗೆ ಸರ್ಕಾರದ ನಿರ್ಧಾರ ತಿಳಿಸಲಾಗಿದೆ. ಬೆಲೆ ಹೆಚ್ಚಳ ಪರಿಣಾಮ ಒಎನ್‌ಜಿಸಿ ಹಾಗೂ ಒಐಎಲ್‌ಗಳು ಕ್ರಮವಾಗಿ 5,000 ಹಾಗೂ 700 ಕೋಟಿ ರೂಪಾಯಿಗಳಷ್ಟು ಹೆಚ್ಚಿನ ವರಮಾನ ಪಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ