ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಾಜಸ್ತಾನದಲ್ಲಿ ಹೊಂಡಾದ ಹೊಸ ದ್ವಿಚಕ್ರ ವಾಹನ ಉತ್ಪಾದನಾ ಘಟಕ (Honda|HMSI)
Bookmark and Share Feedback Print
 
ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೊಂಡಾ ಸಂಸ್ಥೆ ಹೊಸ ಉತ್ಪಾದನಾ ಘಟಕದ ಸ್ಥಾಪನೆಗಾಗಿ ಭಾರತದಲ್ಲಿ 500 ಕೋಟಿ ರೂಪಾಯಿಗಳನ್ನು ಹೂಡಲಿದೆ.

ಜಪಾನ್ನ ಆಟೋವಲಯದ ದೈತ್ಯ ಸಂಸ್ಥೆಯಾದ ಹೊಂಡಾ ಭಾರತದಲ್ಲಿ ಹೊಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ತನ್ನ ಹೊಸ ಘಟಕವನ್ನು ರಾಜಸ್ತಾನದ ಟಪುಕರಾ ಎಂಬ ಪ್ರದೇಶದಲ್ಲಿ ಆರಂಭಿಸಲಿದೆ. ಭಾರತದಲ್ಲಿ ಈಗಾಗಲೇ ಹರಿಯಾಣಾದ ಮಾನೇಸರ್ ಬಳಿ ಒಂದು ಸ್ಕೂಟರ್ ಉತ್ಪಾದನಾ ಘಟಕವನ್ನು ಹೊಂದಿದೆ.

ಹೊಸ ಘಟಕದ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಹೋಂಡಾ ಸಂಸ್ಥೆಯ ಏಷ್ಯಾ ಘಟಕದ ಅಧ್ಯಕ್ಷ ಫ್ಯುಮಿಹಿಕೋ ಕೆ, ಭಾರತ ಹೊಂಡಾ ಸಂಸ್ಥೆಯ ಬಹುಮುಖ್ಯವಾದ ಮಾರುಕಟ್ಟೆಯಾಗಿದ್ದು, ಮುಂದಿನ ದಿನಗಳಲ್ಲಿ ಭಾರೀ ವೇದಿಕೆಯಾಗಿ ಬೆಳೆಯಲಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದ್ವಿಚಕ್ರ ವಾಹನ, ಹೊಂಡಾ