ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೇ ತಿಂಗಳಲ್ಲಿ ಕಾರು, ದ್ವಿಚಕ್ರ ವಾಹನ ಮಾರಾಟದಲ್ಲಿ ದಾಖಲೆ (General motors|Maruti|Honda|Tata Motors|Hyundai India)
Bookmark and Share Feedback Print
 
ಹೊಸ ಹೊಸ ಮಾಡೆಲ್‌ಗಳು, ಆಕರ್ಷಕ ಬಡ್ಡಿದರಗಳು ಇದೀಗ ಕಾರು ಮಾರಾಟವನ್ನು ಹೆಚ್ಚಿಸಿದ್ದು, ಮೇ ತಿಂಗಳಲ್ಲಿ ಇದು ಭರ್ಜರಿ ಏರಿಕೆಯಾಗಿದೆ. ದೇಶದ ಪ್ರತಿಷ್ಟಿತ ಕಾರು ತಯಾರಿಕಾ ಸಂಸ್ಥೆಗಳಲ್ಲೊಂದಾದ ಮಾರುತಿ ಸುಝುಕಿ ದಾಖಲೆಯ ಸಂಖ್ಯೆಯಲ್ಲಿ ಮೇ ತಿಂಗಳಲ್ಲಿ ಕಾರು ಮಾರಾಟ ಮಾಡಿದೆ. 1.02 ಲಕ್ಷ ಕಾರುಗಳನ್ನು ಒಂದೇ ತಿಂಗಳಲ್ಲಿ ಮಾರಾಟ ಮಾಡಿದ ಕೀರ್ತಿ ಇದರದ್ದು. ಹೊಸ ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಿರುವ ಜೊತೆಗೆ ಹಳೆಯ ವ್ಯಾಗನಾರ್ ಸೇರಿದಂತೆ ಇತರ ಮಾಡೆಲ್‌ಗಳನ್ನು ಮತ್ತಷ್ಟು ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಿರುವುದು ಮಾರಾಟಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಭಾರತದಲ್ಲಿ ಉತ್ತಮ ಮಾರಾಟ ಕಾಣುತ್ತಿರುವ ಹ್ಯುಂಡೈ ಇಂಡಿಯಾ, ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಫೋರ್ಡ್ ಹಾಗೂ ಜನರಲ್ ಮೋಟಾರ್ಸ್ ಕಾರುಗಳಲ್ಲೂ ಕೂಡಾ ಉತ್ತಮ ಮಾರಾಟ ದಾಖಲಾಗಿದೆ.

ಕಾರು ಮಾರುಕಟ್ಟೆ ತಜ್ಞ ರಾಕೇಶ್ ಬಾತ್ರಾ ಪ್ರಕಾರ, ಹೊಸ ಹಣಕಾಸು ವರ್ಷ ಉತ್ತಮವಾಗಿ ಆರಂಭವಾಗಿದ್ದು, ಕಾರು ಮಾರಾಟದಲ್ಲಿ ದಾಖಲೆ ಸಂಖ್ಯೆ ದಾಖಲಾಗಿದೆ. ಹೊಸ ಹೊಸ ಆಕರ್ಷಕ ಬಡ್ಡಿ ದರ, ಹೊಸ ಹೊಸ ಥರಹೇವಾರಿ ಮಾಡೆಲ್‌ಗಳು ಕಾರು ಕೊಳ್ಳಬಯಸುವವರ ಆಸಕ್ತಿ ಕೆರಳಿಸಿದೆ. ಹೀಗಾಗಿ ಕಾರು ಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ.

ದ್ವಿಚಕ್ರ ವಾಹನದ ಮಾರಾಟದಲ್ಲೂ ಉತ್ತಮ ಏರಿಕೆ ಕಂಡಿದ್ದು, ಹೀರೋ ಹೊಂಡಾ, ಬಜಾಜ್ ಹಾಗೂ ಟಿವಿಎಸ್ ಸಂಸ್ಥೆಯ ಬೈಕ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಕಾಣುತ್ತಿದೆ. ಹೀರೋ ಹೊಂಡಾ ಸಂಸ್ಥೆಯ 4.35 ಲಕ್ಷ ದ್ವಿಚಕ್ರ ವಾಹನಗಳು ಮೇ ತಿಂಗಳಲ್ಲಿ ಮಾರಾಟವಾಗಿದೆ. ಆ ಮೂಲಕ ತಾನು ಮಾಡಿದ್ದ ಕಳೆದ ತಿಂಗಳ ದಾಖಲೆಯನ್ನು ಮುರಿದು ಹಾಕಿದೆ.
ಸಂಬಂಧಿತ ಮಾಹಿತಿ ಹುಡುಕಿ