ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಪ್ಯಾಡ್: 2 ತಿಂಗಳಲ್ಲೇ 2 ಮಿಲಿಯನ್ ಮಾರಾಟ! (New York|Apple Inc|iPads)
Bookmark and Share Feedback Print
 
PR
ಕಳೆದ ಎರಡು ತಿಂಗಳ ಹಿಂದಷ್ಟೇ ಯುಎಸ್‌ನಲ್ಲಿ ಬಿಡುಗಡೆಯಾಗಿದ್ದ ಆಪಲ್ ಸಂಸ್ಥೆಯ ಐಪ್ಯಾಡ್ ಇದೀಗ ಬರೋಬ್ಬರಿ 2 ಮಿಲಿಯನ್‌ಗಳಷ್ಟು ಮಾರಾಟ ಕಂಡಿದೆ.

ಮೊದಲ ಒಂದು ತಿಂಗಳಲ್ಲೇ ಒಂದು ಮಿಲಿಯನ್ ಮಾರಾಟ ಕಂಡಿದೆ ಎಂದು ಹೇಳಿಕೊಂಡಿದ್ದ ಸಂಸ್ಥೆ ಇದೀಗ ಎರಡು ತಿಂಗಳಲ್ಲಿ 2 ಮಿಲಿಯನ್ ಐಪ್ಯಾಡ್ ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದೆ. ಹಾಗಾಗಿ ಇದು ಐಫೋನ್‌ಗಿಂದಲೂ ದಾಖಲೆಯ ಸಂಖ್ಯೆಯಲ್ಲಿ ಮಾರಾಟ ಕಂಡು ಮೈಲುಗಲ್ಲನ್ನೇ ಸೃಷ್ಟಿಸಿದೆ.

ಸಾಗರೋತ್ತರ ಮಾರುಕಟ್ಟೆಯಲ್ಲಿ ಇದೀಗ ಐಪ್ಯಾಡ್‌ಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದ್ದು ಯುವಜನತೆ ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸ್ಪೈನ್, ಸ್ವಿಜರ್‌ಲ್ಯಾಂಡ್ ಹಾಗೂ ಇಂಗ್ಲೆಂಡ್‌ನಲ್ಲಿ ಉತ್ತಮ ಮಾರಾಟ ಕಾಣುತ್ತಿದೆ. ಬೇಡಿಕೆಯ ಪೂರೈಕೆಯೇ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ವಿಡಿಯೋ, ಗೇಮ್ಸ್, ಇ-ಪುಸ್ತಕ ಓದುವುದು, ವೆಬ್ ಬ್ರೌಸಿಂಗ್ ಸೇರಿದಂತೆ ಹಲವು ಕಾರ್ಯಗಳಿಗೆ ಬಳಕೆಯಾಗುವ ಐಪ್ಯಾಡ್ ಜುಲೈ ತಿಂಗಳೊಳಗೆ ಇನ್ನೂ 9 ದೇಶಗಳಿಗೆ ಲಗ್ಗೆಯಿಡಲಿದೆ.
ಸಂಬಂಧಿತ ಮಾಹಿತಿ ಹುಡುಕಿ