ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಾಫಿ ಉತ್ಪಾದನೆ ಹೆಚ್ಚಳ: ರಫ್ತಿನಲ್ಲಿ ಶೇ.50 ಪ್ರಗತಿ (Coffee | Export | Tata Coffee | Nestle)
Bookmark and Share Feedback Print
 
ದೇಶದ ಕಾಫಿ ರಫ್ತು ಪ್ರಮಾಣ ಈ ವರ್ಷದ ಜನವರಿಯಿಂದ ಮೇ ತಿಂಗಳವರೆಗೆ 1,29,815 ಟನ್‌ಗಳಿಗೆ ಹೆಚ್ಚಾಗಿದೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ.50ರಷ್ಟು ಏರಿಕೆಯಾಗಿದೆ.

ಕಾಫಿ ಉತ್ಪಾದನೆ ಈಗ ಹೆಚ್ಚಾಗಿದ್ದು, ದೇಶ ಕಾಫಿ ರಫ್ತು ಮಾಡುವ ಏಷ್ಯಾದ ಮೂರನೇ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಿದೆ. ಉತ್ಪಾದನೆ ಹೆಚ್ಚಿರುವುದರಿಂದ ರಫ್ತೂ ಕೂಡಾ ಹೆಚ್ಚಿದೆ.

ಇದಲ್ಲದೆ ಕಾಫಿ ಸೇವನೆ ಪ್ರಮಾಣವೂ ವಿಶ್ವದಲ್ಲಿ ಹೆಚ್ಚಾಗಿರುವುದು ಕಾಫಿಯ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರಫ್ತು ಪ್ರಮಾಣದಲ್ಲಿ ಏರಿಕೆಯಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ.

ಟಾಟಾ ಕಾಫಿ, ನೆಸ್ಲೆ ಮತ್ತಿತರ ಸಂಸ್ಥೆಗಳು ತಮ್ಮ ಉತ್ಪಾದನೆಯ ಬಹುಪಾಲು ಕಾಫಿಯನ್ನು ಇಟಲಿಸ ರಷ್ಯಾ ಜರ್ಮನಿ ಮತ್ತಿತರ ದೇಶಗಳಿಗೆ ರಫ್ತು ಮಾಡುತ್ತಿವೆ.

ಸದ್ಯ ಕಾಫಿ ಉತ್ಪಾದನೆ 2.89 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಈ ಹಿಂದೆ ಉತ್ಪಾದನೆ ಸುಮಾರು 2.62 ಲಕ್ಷ ಟನ್‌ಗಳಷ್ಟಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಫಿ, ರಫ್ತು, ಟಾಟಾ ಕಾಫಿ