ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೂಗಲ್ ನೋಡಿದ್ದಕ್ಕೆ ಅಪಘಾತ: 47 ಲಕ್ಷ ಪರಿಹಾರ ಕೇಳಿದ ಮಹಿಳೆ (Google | Accident)
Bookmark and Share Feedback Print
 
ಗೂಗಲ್ ತೋರಿಸುತ್ತಿದ್ದ ನಕ್ಷೆ ನೋಡಿಕೊಂಡು ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂಬ ಕಾರಣಕ್ಕಾಗಿ ಮಹಿಳೆಯೊಬ್ಬರು ಗೂಗಲ್ ಸಂಸ್ಥೆಯ ಮೇಲೆಯೇ ಕೇಸು ದಾಖಲಿಸಿದ್ದಾರೆ.

ಹೌದು. ಗೂಗಲ್ ಸಂಸ್ಥೆ ವಿರುದ್ಧ ಅಮೆರಿಕದ ಸಾಲ್ಟ್‌ಲೇಕ್ ಸಿಟಿಯ ಮಹಿಳೆ ಬರೋಬ್ಬರಿ 47 ಲಕ್ಷ ರೂಪಾಯಿ ಪರಿಹಾರ ಕೋರಿ ಅರ್ಜಿ ದಾಖಲಿಸಿದ್ದಾರೆ. ಗೂಗಲ್ ಸರ್ಚ್ ಇಂಜಿನ್ ತನಗೆ ತಪ್ಪು ದಾರಿ ತೋರಿಸಿದ್ದರಿಂದ ತಾನು ಅಪಘಾತಕ್ಕೀಡಾಗಬೇಕಾಯಿತು ಎಂದು ಆರೋಪಿಸಿದ್ದಾರೆ.

ತಾನು ರಸ್ತೆಯೊಂದರಲ್ಲಿ ಸಾಗುತ್ತಿರುವಾಗ ನನ್ನ ಮೊಬೈಲ್ ನಲ್ಲಿನ ಗೂಗಲ್ ಡೈರೈಕ್ಷನ್ ನಕ್ಷೆ ನೋಡಿಕೊಂಡು ಸಾಗುತ್ತಿದ್ದೆ. ಆಗ ಎದುರಿಗೆ ಬಂದ ಸೈಕಲ್ ಸವಾರ ಡಿಕ್ಕಿ ಹೊಡೆದಿದ್ದ. ಹೀಗಾಗಿ ಅಪಘಾತಕ್ಕೀಡಾಗಬೇಕಾಯಿತು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ. ಅಲ್ಲದೆ ಆಕೆ ಹೋಗುತ್ತಿದ್ದ ಮಾರ್ಗ ಪಾದಾಚಾರಿಗಳಿಗೆ ಸುರಕ್ಷಿತವಾಗಿರಲಿಲ್ಲ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೂಗಲ್, ಅಮೆರಿಕ, ಕೇಸು, ಪರಿಹಾರ