ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಂಡವಾಳ ಆಕರ್ಷಿಸಬಲ್ಲ ವಿಶ್ವದ 2ನೇ ರಾಷ್ಟ್ರವಾಗಿ ಭಾರತ (FDI | India | China)
Bookmark and Share Feedback Print
 
ಭಾರತ ಹಾಗೂ ಚೀನಾ ಹೂಡಿಕೆ ಮಾಡಲು ಅತ್ಯುತ್ತಮ ರಾಷ್ಟ್ರಗಳೆಂದು ಸಮೀಕ್ಷೆಯೊಂದು ಹೇಳಿದೆ. ಮುಂಬರುವ ದಿನಗಳಲ್ಲಿ ವಿದೇಸೀ ಹೂಡಿಕೆ ಆಕರ್ಷಿಸಬಲ್ಲ ರಾಷ್ಟ್ರಗಳ ಪೈಕಿ ಚೀನಾ ಮೊದಲ ದೇಶವಾದರೆ ಭಾರತ ಎರಡನೆಯದ್ದು.

ಯುರೋಪ್ ಕೇಂದ್ರೀಕರಿಸಿ ನಡೆಸಿದ ಈ ಸಮೀಕ್ಷೆಯ ಪ್ರಕಾರ ವಿದೇಶೀ ಬಂಡವಾಳ ಹೂಡಿಕೆಗೆ ಚೀನಾ (ಶೇ.39) ಅತ್ಯಂತ ಪ್ರಶಸ್ತ ರಾಷ್ಟ್ರವಾದರೆ, ಎರಡನೇ ಸ್ಥಾನದಲ್ಲಿ ಪಶ್ಚಿಮ ಯುರೋಪ್ (ಶೇ.38) ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಮಧ್ಯ ಹಾಗೂ ಪೂರ್ವ ಯುರೋಪ್ (ಶೇ.24) ರಾಷ್ಟ್ರಗಳು ಮೂರನೇ ಸ್ಥಾನವಾದರೆ, ಭಾರತ ಹಾಗೂ ಉತ್ತರ ಅಮೆರಿಕಾ (ಶೇ.22) ನಾಲ್ಕನೇ ಸ್ಥಾನದಲ್ಲಿದೆ.

ಆದರೆ ಆರ್ಥಿಕ ಚೇತರಿಕೆಯ ಹಿನ್ನೆಲೆಯಲ್ಲಿ ನೋಡಿದರೆ ಮುಂದಿನ ದಿನಗಳಲ್ಲಿ ಬಂಡವಾಳವನ್ನು ಆಕರ್ಷಿಸಬಲ್ಲ ದೇಶಗಳ ಸಾಧ್ಯತೆಗಳನ್ನು ನೋಡಿದರೆ ಮೊದಲ ಸ್ಥಾನದಲ್ಲಿ ಚೀನಾ (ಶೇ.66) ಇದ್ದರೆ ಎರಡನೇ ಸ್ಥಾನದಲ್ಲಿ ಭಾರತ (ಶೇ.61) ಇದೆ. ಮಧ್ಯ ಹಾಗೂ ಪೂರ್ವ ಯುರೋಪ್ ದೇಶಗಳು (ಶೇ.59) ಇದೆ.
ಸಂಬಂಧಿತ ಮಾಹಿತಿ ಹುಡುಕಿ