ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ಹಣದುಬ್ಬರ ಶೇ.16.55ಕ್ಕೆ ಏರಿಕೆ; ಚಿಕನ್, ಮೀನು ದುಬಾರಿ (Food inflation | fish marine | poultry chicken)
Bookmark and Share Feedback Print
 
ಮೇ 22ಕ್ಕೆ ಅಂತ್ಯವಾದ ವಾರದಲ್ಲಿ ಆಹಾರ ಹಣದುಬ್ಬರ ಶೇ.16.55ಕ್ಕೆ ಏರಿದ್ದು, ಆಹಾರ ಧಾನ್ಯಗಲು, ತರಕಾರಿ ಹಾಗೂ ಹಣ್ಣುಗಳ ಬೆಲೆ ಗಗನಕ್ಕೇರಿದೆ.

ಹಣದುಬ್ಬರ ಈ ಮೊದಲ ವಾರಕ್ಕಿಂತ ಶೇ.0.32ರಷ್ಟು ಏರಿಕೆಯಾಗಿದ್ದು, ಈ ಮೊದಲ ವಾರದಲ್ಲಿ ಅದು ಶೇ.16.23ರಷ್ಟಿತ್ತು.

ಮೀನು ಹಾಗೂ ಸಾಗರದ ಆಹಾರ ಪದಾರ್ಥಗಳಿಗೆ ಶೇ.7ರಷ್ಟು ಬೆಲೆ ಹೆಚ್ಚಾಗಿದ್ದು, ಚಿಕನ್‌ಗೆ ಶೇ.5ರಷ್ಟು ಏರಿದೆ. ಬಾರ್ಲಿ, ಹೆಸರು ಬೇಳೆ ಬೆಲೆ ಶೇ.2ರಷ್ಟು ಏರಿದೆ. ಆದರೆ ಕಾಫಿ ಬೆಲೆ ಶೇ.5ರಷ್ಟು ಇಳಿಕೆಯಾದರೆ ಗೋಧಿ ಬೆಲೆ ಶೇ.1ರಷ್ಟು ಇಳಿಕೆಯಾಗಿದೆ.

ಆಹಾರೇತರ ವಸ್ತುಗಳ ಪೈಕಿ, ರಬ್ಬರ್ ಬೆಲೆ ಶೇ.5ರಷ್ಟು ಏರಿದರೆ, ರೇಷ್ಮೆ ಹಾಗೂ ಹರಳು ಕಾಳಿನ ಬೆಲೆ ಶೇ.4ರಷ್ಟು ಏರಿದೆ.

ವಾರ್ಷಿಕವಾಗಿ ಆಹಾರ ಧಾನ್ಯಗಳ ಬೆಲೆ ಶೇ.30.84ರಷ್ಟು ಏರಿದ್ದು ಹಾಲಿನ ಬೆಲೆ ಶೇ.21.12ರಷ್ಟು ಹೆಚ್ಚಿದೆ. ಹಣ್ಣಿನ ಬೆಲೆ ಶೇ.13.74ರಷ್ಟು ಅಧಿಕವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ, ಚಿಕನ್, ಮೀನು