ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೆಟ್ರೋಲ್, ಡಿಸೇಲ್ ಬೆಲೆ 3.50ರೂ. ಏರಿಕೆ ಸಾಧ್ಯತೆ (Petrol | diesel | Pranab Mukherjee | Kirit Parikh)
Bookmark and Share Feedback Print
 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಕಂಡಿರುವ ಅಂಶವನ್ನು ಪರಿಗಣಿಸಿ, ಅದರನ್ವಯ ಜನರಿಗೆ ಹೊರೆಯಾಗದಂತೆ ಬೆಲೆ ಹೆಚ್ಚಿಸಲು ಮುಂದಾಗಿರುವ ಆಡಳಿತಾರೂಢ ಯುಪಿಎ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಲೀಟರ್‌ಗೆ 3.50ರಷ್ಟು ಹೆಚ್ಚಿಸುವ ಬಗ್ಗೆ ಮುಂದಿನ ವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಚಿವರ ಸಮಿತಿ ಸಭೆ ಜೂನ್ 7ರಂದು ನಡೆಯಲಿದ್ದು, ಕಿರಿಟ್ ಪಾರೀಖ್ ಸಮಿತಿಯ ಶಿಫಾರಸ್ಸಿನಂತೆ ತೈಲ ಬೆಲೆಗಳ ಮೇಲಿನ ಸರ್ಕಾರಿ ನಿಯಂತ್ರಣವನ್ನು ತೆಗೆದು ಹಾಕುವ ಕುರಿತು ಚರ್ಚೆ ನಡೆಸಲಿದೆ.

ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಅಧಿಕವಾಗಿದ್ದಾಗ ಸರ್ಕಾರ ತೈಲ ಬೆಲೆಗಳ ಮೇಲಿನ ನಿಯಂತ್ರಣವನ್ನು ರದ್ದುಗೊಳಿಸಿದರೆ ಪ್ರತೀ ಲೀಟರ್ ಪೆಟ್ರೋಲ್, ಡಿಸೇಲ್ ಬೆಲೆ ದುಬಾರಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಬೆಲೆ ನಿಯಂತ್ರಣ ರದ್ದತಿಗೆ ಮುಂದಾಗುವ ಬಗ್ಗೆ ಅನುಮಾನಗಳಿತ್ತು. ಈಗ ಮಾರುಕಟ್ಟೆಯಲ್ಲಿ ಬೆಲೆ ಇಳಿದಿರುವುದು ಬೆಲೆ ನಿಯಂತ್ರಣ ರದ್ದುಗೊಳಿಸಲು ಮತ್ತು ಲೀಟರಿಗೆ 3.50ರೂ. ಹೆಚ್ಚಿಸುವ ಉತ್ತಮ ಅವಕಾಶಕ್ಕೆ ಎಡೆಮಾಡಿಕೊಟ್ಟಿದೆ.

ಇದೀಗ ಬೆಲೆ ನಿಯಂತ್ರಣ ರದ್ದುಗೊಳಿಸಲು ಮುಂದಾಗಿರುವ ಸರ್ಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ರೂ.3.35 ಹಾಗೂ ಡಿಸೇಲ್‌ಗೆ ರೂ.3.49ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ದೆಹಲಿಯಲ್ಲಿ ಪ್ರಸಕ್ತವಾಗಿ ಪೆಟ್ರೋಲ್ ಬೆಲೆ ಲೀಟರ್‌ಗೆ 47.93ರೂ. ಹಾಗೂ ಡಿಸೇಲ್‌ಗೆ 38.10ರೂ. ಇದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ 10ಡಾಲರ್‌ನಷ್ಟು ಉಳಿತಾಯವಾಗಲಿದ್ದು, ಪ್ರತಿ ಬ್ಯಾರೆಲ್‌ಗೆ 72-74ಡಾಲರ್‌ ಬೆಲೆ ಇದೆ. ಆ ನಿಟ್ಟಿನಲ್ಲಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಜನರಿಗೆ ಹೊರೆಯಾಗದಂತೆ ಏರಿಸಲು ಅನುಕೂಲವಾದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ