ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸ್ಟೀಲ್ ಪ್ಲ್ಯಾಂಟ್: ಕರ್ನಾಟಕದ ಜತೆ ಪೋಸ್ಕೋ ಒಪ್ಪಂದ (Posco | Karnataka | steel plant | Bangalore | Murugesh Nirani)
Bookmark and Share Feedback Print
 
ಜಗತ್ತಿನಲ್ಲಿಯೇ ಐದನೇ ಅತೀ ದೊಡ್ಡ ಸ್ಟೀಲ್ ಉತ್ಪಾದನಾ ಕಂಪನಿಯಾದ ಪೋಸ್ಕೋ ಕಂಪನಿ ಕರ್ನಾಟಕದಲ್ಲಿ ಸುಮಾರು ಆರು ಮಿಲಿಯನ್ ಟನ್ ಸ್ಟೀಲ್ ಉತ್ಪಾದಿಸುವ ಪ್ಲ್ಯಾಂಟ್ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ರಾಜ್ಯ ಕೈಗಾರಿಕಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುತ್ತಿದ್ದು, ಎರಡನೇಯ ದಿನವಾದ ಇಂದಿನ ಸಮಾವೇಶದಲ್ಲಿ ಪೋಸ್ಕೋ ರಾಜ್ಯ ಸರ್ಕಾರದ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ದಕ್ಷಿಣ ಕೊರಿಯಾದ ಸ್ಟೀಲ್ ಉತ್ಪಾದನಾ ಕಂಪನಿಯಾದ ಪೋಸ್ಕೋ 320 ಬಿಲಿಯನ್‌ನಷ್ಟು ಬಂಡವಾಳ ಹೂಡುವ ಸಾಧ್ಯತೆ ಇರುವುದಾಗಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಪೋಸ್ಕೋ ಕಂಪನಿಯ ಈ ಯೋಜನೆಯಿಂದಾಗಿ ಸುಮಾರು 20ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಆ ನಿಟ್ಟಿನಲ್ಲಿ ನಾವು ಪೋಸ್ಕೋ ಕಂಪನಿಗೆ ಪ್ಲ್ಯಾಂಟ್ ಸ್ಥಾಪಿಸಲು ಸುಮಾರು 4ಸಾವಿರ ಎಕರೆ ಭೂಮಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ