ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಂಡವಾಳ-ಕರ್ನಾಟಕಕ್ಕೆ ಮೊದಲ ಆದ್ಯತೆ: ಲಕ್ಷ್ಮಿ ಮಿತ್ತಲ್ (Karnataka | ArcelorMittal | Jharkhand | Orissa | Global Investors Meet)
Bookmark and Share Feedback Print
 
ಸ್ಟೀಲ್ ಕಂಪನಿ ಸ್ಥಾಪನೆಯೊಂದಿಗೆ ಬಂಡವಾಳ ಹೂಡಲು ಕರ್ನಾಟಕಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದಾಗಿ ಜಗತ್ತಿನ ಅತೀ ದೊಡ್ಡ ಸ್ಟೀಲ್ ತಯಾರಿಕಾ ಸಂಸ್ಥೆಯಾದ ಅರ್ಸೆಲೋಮಿತ್ತಲ್ ಸಂಸ್ಥೆ ತಿಳಿಸಿದ್ದು, ಜಾರ್ಖಂಡ್ ಮತ್ತು ಒರಿಸ್ಸಾದಲ್ಲಿ ಸಂಸ್ಥೆಯ ಘಟಕ ಸ್ಥಾಪಿಸಲು ಹಲವಾರು ಸಮಸ್ಯೆಗಳು ತಲೆದೋರಿದ್ದರಿಂದ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದೆ.

ಆ ನಿಟ್ಟಿನಲ್ಲಿ ನಮ್ಮ ಕಂಪನಿಯ ಬೆಳವಣಿಗೆಯನ್ನು ರಾಜ್ಯದಲ್ಲಿ ನೋಡಿಕೊಂಡು ಮತ್ತಷ್ಟು ಕಂಪನಿಗಳು ಬಂಡವಾಳ ಹೂಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಂಸ್ಥೆಯ ವರಿಷ್ಠ ಲಕ್ಷ್ಮಿಮಿತ್ತಲ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಜಾರ್ಖಂಡ್ ಮತ್ತು ಒರಿಸ್ಸಾದಲ್ಲಿ ಜನರ ವಿರೋಧ, ಭೂಮಿ ಸಮಸ್ಯೆಯಿಂದಾಗಿ ಕಂಪನಿಯ ಸ್ಟೀಲ್ ಘಟಕ ಸ್ಥಾಪನೆ ಯೋಜನೆ ಕಳೆದ ಐದು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಆ ಕಾರಣದಿಂದಾಗಿ ನಾವು ಕರ್ನಾಟಕಕ್ಕೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು.

ಕರ್ನಾಟಕದಲ್ಲಿ ನಾವು ಬಂಡವಾಳ ಹೂಡಲು ಪೂರಕ ವಾತಾವರಣ ನಿರಾಂತಕವಾಗಿ ಲಭಿಸಿ, ನಮ್ಮ ಘಟಕ ಯಶಸ್ವಿಯಾಗಿ ಆರಂಭವಾದ ನಂತರ ಜಾರ್ಖಂಡ್ ಮತ್ತು ಒರಿಸ್ಸಾದಲ್ಲಿ ಏನು ನಡೆಯಲಿದೆ ನೀವೇ ನೋಡಿ ಕಾದು ನೋಡಿ ಎಂದು ಉದ್ಯಾನನಗರಿಯಲ್ಲಿನ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಅಭಿಪ್ರಾಯವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ