ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಶೋಕ್ ಲೇಲ್ಯಾಂಡ್ ಮಾರಾಟದಲ್ಲಿ ಹೆಚ್ಚಳ (Ashok Leyland | Hinduja Group | sales up | company)
Bookmark and Share Feedback Print
 
ಪ್ರತಿಷ್ಠಿತ ಹಿಂದೂಜಾ ಕಂಪನಿಯ ಅಶೋಕ್ ಲೇಲ್ಯಾಂಡ್ ಪ್ರಸಕ್ತ ಸಾಲಿನ ವಾಹನ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿದೆ ಎಂದು ತಿಳಿಸಿದೆ.

ಕಳೆದ ವರ್ಷದ ಮೇ ತಿಂಗಳಿನಲ್ಲಿ ಕಂಪನಿ 1,977 ವಾಹನಗಳನ್ನು ಮಾರಾಟ ಮಾಡಿದ್ದರೆ, 2010ರ ಮೇ ತಿಂಗಳಿನಲ್ಲಿ 6,502 ವಾಹನ ಮಾರಾಟ ಮಾಡುವ ಮೂಲಕ ಮೂರುಪಟ್ಟು ಪ್ರಗತಿ ಸಾಧಿಸಿದೆ ಎಂದು ಅಶೋಕ್ ಲೇಲ್ಯಾಂಡ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ದೇಶೀಯ ಮಾರಾಟದಲ್ಲಿಯೂ ಹೆಚ್ಚಳ ಕಂಡಿದ್ದು, ಕಳೆದ ವರ್ಷ ಮೇ ತಿಂಗಳಿನಲ್ಲಿ 1,697 ವಾಹನ ಮಾರಾಟವಾಗಿದ್ದರೆ, ಪ್ರಸಕ್ತ ಸಾಲಿನ ಮೇ ತಿಂಗಳಿನಲ್ಲಿ 5,973 ವಾಹನ ಮಾರಾಟವಾಗಿದೆ ಎಂದಿದೆ. ಅದೇ ರೀತಿ ವಾಹನ ರಫ್ತು ಕೂಡ ಎರಡು ಪಟ್ಟು ಹೆಚ್ಚಳವಾಗಿದ್ದು, ಮೇ ತಿಂಗಳಿನಲ್ಲಿ 529ವಾಹನ ರಪ್ತುಗೊಂಡಿದ್ದು, ಕಳೆದ ವರ್ಷ 280ವಾಹನ ರಪ್ತಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ