ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಲಯನ್ಸ್ ಜತೆ ಯಾವುದೇ ಮಾತುಕತೆ ನಡೆದಿಲ್ಲ: ಎಂಟಿಎನ್ (Reliance Comm | MTN | South Africa | India | Abu Dhabi)
Bookmark and Share Feedback Print
 
ದಕ್ಷಿಣ ಆಫ್ರಿಕಾದ ಎಂಟಿಎನ್ ಕಂಪನಿಯನ್ನು ರಿಲಯನ್ಸ್ ಕಂಪನಿ ಜೊತೆ ವಿಲೀನಗೊಳಿಸುವ ಇಚ್ಚೆ ಹೊಂದಿದೆ ಎಂಬ ಮಾಧ್ಯಮಗಳ ವರದಿಯನ್ನು ಎಂಟಿಎನ್ ಗ್ರೂಪ್ ತಿಳಿಸಿದ್ದು, ತಾವು ಭಾರತದ ರಿಲಯನ್ಸ್ ಕಮ್ಯೂನಿಕೇಷನ್ಸ್ ಸಂಸ್ಥೆ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತದ ನಂ.2ಮೊಬೈಲ್ ಆಪರೇಟರ್ ಸಂಸ್ಥೆಯಾಗಿರುವ ರಿಲಯನ್ಸ್ ಕಮ್ಯೂನಿಕೇಷನ್ಸ್ ಸಂಸ್ಥೆ ದಕ್ಷಿಣ ಆಫ್ರಿಕಾದ ಸಂಸ್ಥೆ ಎಂಟಿಎನ್ ಅನ್ನು ಖರೀದಿಸುವುದಾಗಿ ಇಚ್ಚೆವ್ಯಕ್ತಪಡಿಸಿತ್ತು. ಈ ಬಗ್ಗೆ ರಿಲಯನ್ಸ್ ಸಂಸ್ಥೆ ಎಂಟಿಎನ್ ಜೊತೆ ಮಾತುಕತೆ ನಡೆಸಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಎಂಟಿಎನ್ ವಕ್ತಾರ, ಇದು ಸುಳ್ಳು ವರದಿ, ಅಂತಹ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಹೇಳಿದರು.

ಒಂದು ವೇಳೆ ನಾವು ರಿಲಯನ್ಸ್ ಕಂಪನಿ ಜೊತೆ ಮಾತುಕತೆ ನಡೆಸಿದ್ದೇ ಆದಲ್ಲಿ ಅದನ್ನು ನಾವೇ ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಆ ನಿಟ್ಟಿನಲ್ಲಿ ವಿಲೀನ ಪ್ರಕ್ರಿಯೆ ಮಾತುಕತೆ ವರದಿಯಲ್ಲಿ ಹುರುಳಿಲ್ಲ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ