ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಮಾ ಉತ್ಪನ್ನ ಮಾರಾಟಕ್ಕೆ ವಿಜಯಾ ಬ್ಯಾಂಕ್ ಒಪ್ಪಂದ (Bangalore | Vijaya Bank | Karnataka | BJP | Yeddyurappa)
Bookmark and Share Feedback Print
 
ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಿಂದ ರಾಜ್ಯಕ್ಕೆ ಸುಮಾರು 4ಲಕ್ಷ ಕೋಟಿ ರೂಪಾಯಿ ಹರಿದು ಬಂದಿದ್ದು, ಸಮಾವೇಶದಲ್ಲಿ ಸರ್ಕಾರಿ ವಿಮಾ ಸಂಸ್ಥೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್‌ನ ವಿಮಾ ಉತ್ಪನ್ನಗಳನ್ನು ಹವಾಲಿ ಆಧಾರದ ಮೇಲೆ ಮಾರಾಟ ಮಾಡುವ ಒಪ್ಪಂದಕ್ಕೆ ವಿಜಯಾ ಬ್ಯಾಂಕ್ ಸಹಿ ಹಾಕಿದೆ.

ನಗರದ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಬಂಡವಾಳ ಹೂಡಿಕೆ ಸಮಾವೇಶದ ಕೊನೆಯ ದಿನವಾದ ಶುಕ್ರವಾರ ಎರಡು ಸಂಸ್ಥೆಗಳ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದರು.

ಈ ಒಪ್ಪಂದ ಬ್ಯಾಂಕ್‌ಗೆ ಬಡ್ಡಿಯೇತರ ವರಮಾನ ತಂದುಕೊಡುವುದಲ್ಲದೆ, ಬ್ಯಾಂಕಿನ 7.5 ಮಿಲಿಯನ್ ಗ್ರಾಹಕರಿಗೆ 1160 ಶಾಖೆಗಳ ಮೂಲಕ ಶೀಘ್ರ ಮತ್ತು ಉತ್ತಮ ಗುಣಮಟ್ಟದ ವಿಮಾ ಉತ್ಪನ್ನಗಳನ್ನು ತಲುಪಿಸಲು ಸಹಕಾರಿಯಾಗಲಿದೆ ಎಂದು ವಿಜಯ ಬ್ಯಾಂಕ್ ಅಧ್ಯಕ್ಷ ಆಲ್ಬರ್ಟ್ ತಾವ್ರೋ ತಿಳಿಸಿದರು.

ಇದರಲ್ಲಿ ಕೇವಲ ವಿಮಾ ಉತ್ಪನ್ನಗಳನ್ನು ಗ್ರಾಹಕರಿಗೆ ತೃಪ್ತಿಕರ ರೂಪದಲ್ಲಿ ಮಾರಾಟ ಮಾಡುವುದು ಮಾತ್ರವಲ್ಲ, ಅತಿ ಅಗ್ಗದ ಬೆಲೆಗೆ ವಿಮಾ ಕವಚಗಳನ್ನು ಸಾರ್ವಜನಿಕರಿಗೆ ಒದಗಿಸುವುದೇ ನಮ್ಮ ಸಂಸ್ಥೆಯ ಗುರಿ ಎಂದು ಯುನೈಟೆಡ್ ಇನ್ಸುರೆನ್ಸ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸನ್ ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ