ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಗತ್ತಿನಾದ್ಯಂತ 500,000 ಉದ್ಯೋಗಾವಕಾಶ: ವಾಲ್ ಮಾರ್ಟ್ (Mike Duke | Wal-Mart | New York | jobs | India | Share)
Bookmark and Share Feedback Print
 
ಮುಂದಿನ ವರ್ಷಗಳಲ್ಲಿ ಜಾಗತಿಕವಾಗಿ ಸುಮಾರು 500,000 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು ಎಂದು ಜಗತ್ತಿನ ಪ್ರತಿಷ್ಠಿತ ಕಂಪನಿಯಾದ ವಾಲ್ ಮಾರ್ಟ್ ಶುಕ್ರವಾರ ತಿಳಿಸಿದೆ.

ವಾಲ್ ಮಾರ್ಟ್ ಮಳಿಗೆಗಳ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೈಕ್ ಡ್ಯುಕ್ ಅವರು ಷೇರ್ ಹೋಲ್ಡರ್ ಜೊತೆ ಮಾತನಾಡುತ್ತ, ತಮ್ಮ ಕಂಪನಿಯ ಸ್ಥಳೀಯ ಮಳಿಗೆಗಳ ಮೂಲಕ ಜಾಗತಿಕವಾಗಿ ಗ್ರಾಹಕರಿಗೆ ಸೇವೆ ನೀಡಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಆ ನಿಟ್ಟಿನಲ್ಲಿ ಕಂಪನಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬೆಳೆಯಲು ಸಾಧ್ಯ ಎಂದರು.

ಆ ನೆಲೆಯಲ್ಲಿ ಮಾರುಕಟ್ಟೆ ಯೋಜನೆ ಪರಿಣಾಮಕಾರಿಯಾಗಿ ಬೆಳೆಯಬೇಕಾದರೆ ಉದ್ಯೋಗಿಯ ಕೌಶಲ್ಯ ತುಂಬಾ ಅಗತ್ಯ ಎಂದು ಕಂಪನಿಯ ಶೇರುದಾರರ ವಾರ್ಷಿಕ ಸಭೆಯಲ್ಲಿ ತಿಳಿಸಿದರು.

ಮುಂದಿನ ಐದು ವರ್ಷಗಳಲ್ಲಿ ಕಂಪನಿ 500,000 ಉದ್ಯೋಗಾವಕಾಶವನ್ನು ಜಗತ್ತಿನಾದ್ಯಂತ ಸೃಷ್ಟಿಸಲಾಗುವುದು ಎಂದರು. ನಮಗೆ ತುಂಬಾ ಬುದ್ಧಿವಂತ ಹಾಗೂ ಕೌಶಲ್ಯ ಹೊಂದಿರುವ ಪ್ರತಿಭೆಗಳು ಬೇಕಾಗಿವೆ. ನಂತರ ನಾವು ಅವರನ್ನು ಮುಖ್ಯವಾಹಿನಿಗೆ ತಂದು ಜಾಗತಿಕ ಮಟ್ಟದಲ್ಲಿ ಉತ್ತಮ ಮುಖಂಡನನ್ನಾಗಿ ಮಾಡಲಾಗುವುದು ಎಂದು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ