ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್ಥಿಕ ಹೊಡೆತ ಭಾರತದ ಮೇಲೆ ಪರಿಣಾಮವಿಲ್ಲ: ಮುಖರ್ಜಿ (Pranab Mukherjee | European debt crisis | S Korea | India,)
Bookmark and Share Feedback Print
 
ಯುರೋಪಿಯನ್ ದೇಶಗಳಲ್ಲಿ ಆರ್ಥಿಕ ಹೊಡೆತ ಗ್ರೀಸ್ ಮತ್ತು ಇನ್ನಿತರ ದೇಶಗಳ ಮೇಲೆ ಪರಿಣಾಮ ಬೀರಬಹುದೇ ವಿನಃ ಅದರಿಂದ ಭಾರತ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ಜಾಗತಿಕವಾಗಿ ತಲೆದೋರಿದ ಆರ್ಥಿಕ ಹೊಡೆತದಿಂದ ಈವರೆಗೂ ಭಾರತ ಹೆಚ್ಚಿನ ತೊಂದರೆಯನ್ನು ಅನುಭವಿಸಿಲ್ಲ. ಆರ್ಥಿಕ ಹೊಡೆತವನ್ನು ಭಾರತ ಸಮರ್ಥವಾಗಿ ಎದುರಿಸಿದ್ದೇವೆ. ಹಾಗಾಗಿ ಯುರೋಪ್ ದೇಶದಲ್ಲಿನ ಆರ್ಥಿಕ ಹೊಡೆತದ ಪರಿಣಾಮ ಗ್ರೀಕ್ ಮೇಲೆ ಹೆಚ್ಚಾಗಲಿದೆ. ಆದರೂ ನಾವು ಗ್ರೀಕ್‌ಗೆ ರಫ್ತು ಮಾಡುವ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ಅವರು ಬ್ಯುಸಿನೆಸ್ ನ್ಯೂಸ್ ಚಾನೆಲ್ ಜೊತೆ ಮಾತನಾಡುತ್ತ ಹೇಳಿದರು.

ಆದರೆ ಯುರೋಪ್ ದೇಶಗಳು ಭಾರೀ ಪ್ರಮಾಣದ ಆರ್ಥಿಕ ಹೊಡೆತ ಕಂಡ ಪರಿಣಾಮವಾಗಿ ಆಮದು ಮತ್ತು ರಫ್ತುಗಳ ಮೇಲೆ ಹಣ ವಾಪಸಾತಿಯಲ್ಲಿ ತೊಂದರೆ ಉಂಟಾಗಲಿದೆ ಎಂದ ಮುಖರ್ಜಿ, ಏನೇ ಆದರೂ ಆರ್ಥಿಕ ಹೊಡೆತವನ್ನು ವಿಶ್ವದ ಮುಖಂಡರು ಸರಿದೂಗಿಸಿ ಪರಿಹಾರ ಕಂಡು ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ