ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಹಾ ಉತ್ಪಾದನೆಯಲ್ಲಿ ಶೇ.9.12ರಷ್ಟು ಹೆಚ್ಚಳ (Tea production | April | New Delhi | Exports | January)
Bookmark and Share Feedback Print
 
ಭಾರತದ ಚಹಾ ಉತ್ಪಾದನೆ ಶೇ.9.12ರಷ್ಟು ಹೆಚ್ಚಳ ಕಂಡಿದ್ದು, 2010ರ ಏಪ್ರಿಲ್ ತಿಂಗಳಲ್ಲಿ 682 ಲಕ್ಷ ಕೆಜಿ ಉತ್ಪಾದನೆಯಾಗಿದ್ದು, ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ 625 ಕೆಜಿಯಷ್ಟು ಉತ್ಪಾದನೆಯಾಗಿತ್ತು.

ಅದೇ ರೀತಿ ಟೀ ರಫ್ತು ಕೂಡ ಶೇ.12.3ರಷ್ಟು ಏರಿಕೆ ಕಂಡಿದ್ದು, ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳಿನಲ್ಲಿ 127 ಲಕ್ಷ ಕೆಜಿ ರಫ್ತಾಗಿತ್ತು. ಕಳೆದ ವರ್ಷ ಇದೇ ತಿಂಗಳಿನಲ್ಲಿ 113 ಲಕ್ಷ ಕೆಜೆ ರಫ್ತು ಮಾಡಲಾಗಿತ್ತು.

ಜನವರಿಯಿಂದ ಏಪ್ರಿಲ್ ತಿಂಗಳವರೆಗೆ 1,623 ಲಕ್ಷ ಕೆಜಿ ಚಹಾ ಉತ್ಪಾದನೆ ಮಾಡಲಾಗಿತ್ತು. ಕಳೆದ ವರ್ಷ ಜನವರಿಯಿಂದ ಏಪ್ರಿಲ್‌ವರೆಗೆ 1,444 ಲಕ್ಷ ಕೆಜಿ ಉತ್ಪಾದನೆ ಮಾಡಲಾಗಿತ್ತು. ಮೂರು ತಿಂಗಳ ಅವಧಿಯ ರಫ್ತು ಕೂಡ ಹೆಚ್ಚಳ ಕಂಡಿದ್ದು, 599 ಲಕ್ಷ ಕೆಜಿ ರಫ್ತುಗೊಂಡಿದ್ದು, ಕಳೆದ ವರ್ಷ 498 ಲಕ್ಷ ಕೆಜಿಯಷ್ಟು ರಫ್ತುಗೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ