ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 'ಬೀಟ್' ಡಿಸೇಲ್‌ ಇಂಜಿನ್‌ ಕಾರು ಮಾರುಕಟ್ಟೆಗೆ: ಜಿಎಂ ಇಂಡಿಯಾ (General Motors | Mumbai | Chevrolet Beat | Pune)
Bookmark and Share Feedback Print
 
ಪುಣೆ ಘಟಕದಿಂದ ಡಿಸೇಲ್ ಇಂಜಿನ್‌ನ ಚೆವೊರ್‌ಲೆಟ್ ಬೀಟ್ ಕಾರನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಪ್ರತಿಷ್ಠಿತ ಜನರಲ್ ಮೋಟಾರ್ಸ್ ಇಂಡಿಯಾ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

2011ರ ಜನವರಿಯೊಳಗೆ ತಾಲೆಗಾಂವ್ ಘಟಕದಿಂದ ಡಿಸೇಲ್ ಇಂಜಿನ್ ಹೊಂದಿರುವ ಚೆವೊರ್‌ಲೆಟ್ ಬೀಟ್ ಸಣ್ಣ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಕಂಪನಿಯ ಉಪಾಧ್ಯಕ್ಷ ಅಂಕುಶ್ ಅರೋರಾ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಅದೇ ರೀತಿ 1.2 ಲೀಟರ್‌ನ ಗ್ಯಾಸೋಲಿನ್ ಇಂಜಿನ್ ಕಾರನ್ನೂ ಕೂಡ ತಯಾರಿಸುವುದಾಗಿ ಜನರಲ್ ಮೋಟಾರ್ಸ್ ವಿವರಿಸಿದ್ದು, ಅದನ್ನು 2010ರ ಡಿಸೆಂಬರ್‌ನೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಪುಣೆಯ ತಾಲೆಗಾಂವ್ ಉತ್ಪಾದನಾ ಘಟಕದಲ್ಲಿ 1,60,000 ಇಂಜಿನ್ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ. ಆ ನಿಟ್ಟಿನಲ್ಲಿ ತಾಲೆಗಾಂವ್ ಮತ್ತು ಅಹಮದಾಬಾದ್ ಸಮೀಪದ ಹಾಲೋಲ್ ಘಟಕದಲ್ಲಿ ಆಗೋಸ್ಟ್‌ನಿಂದ ಸೆಪ್ಟೆಂಬರ್‌ನೊಳಗೆ ಪೂರ್ಣ ಪ್ರಮಾಣದಲ್ಲಿ ಇಂಜಿನ್ ಉತ್ಪಾದಿಸುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ