ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದಲ್ಲಿ ಆರ್ ಎಂಡ್ ಡಿ ಸ್ಥಾಪನೆಗೆ ಚಿಂತನೆ: ಟೋಯೊಟಾ (Toyota | R&D centre | Japan | Nakagawa | India)
Bookmark and Share Feedback Print
 
ಭಾರತದಲ್ಲಿ ರಿಸರ್ಚ್ ಮತ್ತು ಡೆವಲಪ್‌ಮೆಂಟ್ ಸೆಂಟರ್ ಮತ್ತು ಇಂಜಿನ್ ಪ್ಲ್ಯಾಂಟ್ ಸ್ಥಾಪಿಸಲು ಜಪಾನಿನ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಯಾದ ಟೋಯೊಟಾ ನಿರ್ಧರಿಸಿದೆ.

ಜಪಾನ್ ಮತ್ತು ಥೈಲ್ಯಾಂಡ್ ಸೇರಿದಂತೆ ಜಗತ್ತಿನ ಇತರೆಡೆ ರಿಸರ್ಚ್ ಮತ್ತು ಡೆವಲಪ್‌ಮೆಂಟ್ ಘಟಕ ಕಾರ್ಯಾಚರಿಸುತ್ತಿರುವುದಾಗಿ ಟೋಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ನ ಹಿರೋಶಿ ನಾಕಾಗಾವಾ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಆರ್ ಎಂಡ್ ಡಿಯನ್ನು ಭಾರತದಲ್ಲಿಯೂ ಸ್ಥಾಪಿಸಲು ನಿರ್ಧರಿಸಿರುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಆ ಘಟಕ ಭಾರತದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂಬ ವಿಶ್ವಾಸ ತಮ್ಮದು ಎಂದರು.

ಭಾರತದಲ್ಲಿ ಟೋಯೊಟಾ ಆರ್ ಎಂಡ್ ಡಿ ಸ್ಥಾಪಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ನಮಗೆ ಅಂತಹ ಅವಕಾಶ ಸಿಕ್ಕಿದಲ್ಲಿ ಭಾರತದಲ್ಲಿ ನಾವು ಆರ್ ಎಂಡ್ ಡಿ ಘಟಕ ಸ್ಥಾಪಿಸುವುದಾಗಿ ತಿಳಿಸಿದರು. ಆದರೆ ಭಾರತದಲ್ಲಿ ವಾರ್ಷಿಕವಾಗಿ 200,000 ಮಾರಾಟವಾಗುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ