ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಂಗಳೂರು ವಿಮಾನ ದುರಂತ; ಮಧ್ಯಂತರ ಪರಿಹಾರ ವಿತರಣೆ (Mangalore crash victims | Air India | interim compensation | Mangalore plane crash)
Bookmark and Share Feedback Print
 
ಮಂಗಳೂರು ವಿಮಾನ ದುರಂತಕ್ಕೆ ಬಲಿಯಾದವರ ಮತ್ತು ಬದುಕುಳಿದ 129 ಕುಟುಂಬಗಳಿಗೆ ಮಧ್ಯಂತರ ಪರಿಹಾರ ಧನವಾಗಿ 11.29 ಕೋಟಿ ರೂಪಾಯಿಗಳನ್ನು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ವಿತರಿಸಿದೆ ಎಂದು ಭಾನುವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದರ ಜತೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ 1.47 ಕೋಟಿ ರೂಪಾಯಿಗಳನ್ನು ಕೂಡ ಬಟವಾಡೆ ಮಾಡಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರರು ತಿಳಿಸಿದ್ದಾರೆ.

ಇದುವರೆಗೆ ಏರ್ ಇಂಡಿಯಾವು 11.29 ಕೋಟಿ ರೂಪಾಯಿಗಳನ್ನು ಮಂಗಳೂರು ವಿಮಾನ ದುರಂತದಲ್ಲಿ ಬದುಕುಳಿದವರು ಮತ್ತು ಸಾವನ್ನಪ್ಪಿದವರ ಕುಟುಂಬಿಕರಿಗೆ ನೀಡಲಾಗಿದೆ ಎಂದು ವಕ್ತಾರರು ವಿವರಣೆ ನೀಡಿದ್ದಾರೆ.

ದುರಂತದಲ್ಲಿ ಮಡಿದ 12 ವರ್ಷಕ್ಕಿಂತ ಮೇಲಿನ ವ್ಯಕ್ತಿಗಳ ಕುಟುಂಬಕ್ಕೆ ಮಧ್ಯಂತರ ಪರಿಹಾರವಾಗಿ 10 ಲಕ್ಷ ರೂಪಾಯಿ ಹಾಗೂ 12 ವರ್ಷದೊಳಗಿನ ಬಲಿಪಶುವಿನ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಏರ್ ಇಂಡಿಯಾ ಪ್ರಕಟಿಸಿತ್ತು.

ಘಟನೆಯಲ್ಲಿ ಗಾಯಗೊಂಡವರಿಗೆ ತಲಾ ಎರಡು ಲಕ್ಷ ರೂಪಾಯಿಗಳಂತೆ ಮಧ್ಯಂತರ ಪರಿಹಾರ ನೀಡುವುದಾಗಿ ಏರ್ ಇಂಡಿಯಾ ತಿಳಿಸಿತ್ತು.

ಈ ಮಧ್ಯಂತರ ಪರಿಹಾರದ ಹಣ ದುರಂತಕ್ಕೆ ಸಂಬಂಧಪಟ್ಟ ಕುಟುಂಬಿಕರ ಕೈ ಸೇರುವಂತಾಗಲು ವಿಮಾನಯಾನ ಸಂಸ್ಥೆಯು ತನ್ನ ಅಧಿಕಾರಿಗಳನ್ನು ಒಳಗೊಂಡ ನಿಯೋಗವನ್ನು ನೇಮಕ ಮಾಡಿದೆ.

ಈ ತಂಡವು ಜೂನ್ 9-10ರ ಅವಧಿಯಲ್ಲಿ ಮತ್ತೆ ಮಂಗಳೂರಿಗೆ ಭೇಟಿ ನೀಡಲಿದ್ದು, ಉಳಿದಿರುವ ಪ್ರಕರಣಗಳನ್ನು ತಹಬದಿಗೆ ತರಲಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ