ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಿಎಂ: ವಾಹನಗಳ ಮಾರಾಟದಲ್ಲಿ ಶೇ.61ರಷ್ಟು ಹೆಚ್ಚಳ (General Motors India| Car sales)
Bookmark and Share Feedback Print
 
ದೇಶದ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜನರಲ್ ಮೋಟಾರ್ಸ್ ಇಂಡಿಯಾ ಕಂಪೆನಿ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮೇ ತಿಂಗಳ ಅವಧಿಯ ವಾಹನಗಳ ಮಾರಾಟದಲ್ಲಿ ಶೇ.61ರಷ್ಟು ಹೆಚ್ಚಳವಾಗಿ 8,225 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಮೇ ತಿಂಗಳ ಅವಧಿಯಲ್ಲಿ 5,109ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಮೇ ತಿಂಗಳ ಅವಧಿಯಲ್ಲಿ 2,812 ಶೆರ್ವಾಲೆಟ್ ಸ್ಪಾರ್ಕ್‌, 2,296 ಶೆರ್ವಾಲೆಟ್ ಬೀಟ್‌, 1,418 ಶೆರ್ವಾಲೆಟ್ ಟವೆರಾ, 854 ಕ್ರೂಸ್, 396 ಶೆರ್ವಾಲೆಟ್ ಎವಿವೊ, 84ಶೆರ್ವಾಲೆಟ್ ಕಾಪ್ಟಿವಾ ಮಾಡೆಲ್ ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ವಿಶಿಷ್ಠ ವಿನ್ಯಾಸ ಹಾಗೂ ಇತರ ಅತ್ಯಾಧುನಿಕ ತಂತ್ರಜ್ಞಾನಗಳಿಂದಾಗಿ ಶೆರ್ವಾಲೆಟ್ ಬೀಟ್, ಕ್ರೂಸ್ ಮತ್ತು ಸ್ಪಾರ್ಕ್ ಮಾಡೆಲ್‌ಗಳ ಕಾರುಗಳಿಗೆ ಗ್ರಾಹಕರ ಬೇಡಿಕೆಯಲ್ಲಿ ಹೆಚ್ಚಳವಾಗಿದೆ. ಶೆರ್ವಾಲೆಟ್ ಸ್ಪಾರ್ಕ್ ಮಾಡೆಲ್‌ ಕಾರು ಇಂಧನ ಸಾಮರ್ಥ್ಯ ಮೌಲ್ಯಕ್ಕೆ ತಕ್ಕಂತೆ ಸಾಮರ್ಥ್ಯ ಹೊಂದಿರುವುದರಿಂದ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಂಪೆನಿಯ ಭಾರತದ ಉಪಾಧ್ಯಕ್ಷ ಪಿ.ಬಾಲೇಂದ್ರನ್ ಮಾತನಾಡಿ, ಉತ್ತಮ ಗುಣಮಟ್ಟ, ವಿಶಿಷ್ಠ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳಿಂದಾಗಿ, ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಜನರಲ್ ಮೋಟಾರ್ಸ್ ಇಂಡಿಯಾ ಇತ್ತೀಚೆಗೆ ಅಹ್ಮದಾಬಾದ್‌ನಲ್ಲಿ ಶೆರ್ವಾಲೆಟ್ ಎವಿವೊ ಸಿಎನ್‌ಜಿ ಮಾಡೆಲ್ ಕಾರನ್ನು ಬಿಡುಗಡೆಗೊಳಿಸಿದ್ದು,ಪರಿಸರ ಸ್ನೇಹಿಯಾಗಿರುವುದರಿಂದ ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ ಎಂದು ಕಂಪೆನಿಯ ಭಾರತದ ಉಪಾಧ್ಯಕ್ಷ ಪಿ.ಬಾಲೇಂದ್ರನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ