ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವರ್ಷಾಂತ್ಯಕ್ಕೆ ವೈಮಾನಿಕ ಕ್ಷೇತ್ರ ಲಾಭದತ್ತ:ಐಎಟಿಎ (Global airlines | IATA | Airline industry | European airlines | Economy)
Bookmark and Share Feedback Print
 
ಕಳೆದ ಮೂರು ತಿಂಗಳುಗಳಿಂದ ನಿರಂತರ ನಷ್ಟ ಅನುಭವಿಸುತ್ತಿರುವ ಅಂತಾರಾಷ್ಟ್ರೀಯ ವೈಮಾನಿಕ ಮಾರುಕಟ್ಟೆ, ಪ್ರಸಕ್ತ ವರ್ಷದಲ್ಲಿ 2.5 ಬಿಲಿಯನ್ ಡಾಲರ್ ನಿವ್ವಳ ಲಾಭಗಳಿಸುವ ಸಾಧ್ಯತೆಗಳಿವೆ ಎಂದು ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್ ಹೇಳಿಕೆ ನೀಡಿದೆ.

ಕಳೆದ ಮಾರ್ಚ್ ತಿಂಗಳ ಅವಧಿಯಲ್ಲಿ 2.8 ಬಿಲಿಯನ್ ಡಾಲರ್‌ಗಳ ನಷ್ಟ ಅನುಭವಿಸಿದ್ದು,ಜೂನ್ ತಿಂಗಳ ಅವಧಿಯವರೆಗೆ 2.5 ಬಿಲಿಯನ್ ಡಾಲರ್ ನಿವ್ವಳ ಲಾಭಗಳಿಸುವ ಸಾಧ್ಯತೆಗಳಿವೆ. ಆದರೆ ಯುರೋಪ್ ವೈಮಾನಿಕ ಸಂಸ್ಥೆಗಳು 2.8 ಬಿಲಿಯನ್ ನಷ್ಟ ಅನುಭವಿಸಲಿವೆ ಎಂದು ಐಎಟಿಎ ತಿಳಿಸಿದೆ.

ಜಾಗತಿಕ ಆರ್ಥಿಕತೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ವೇಗದಲ್ಲಿ ಚೇತರಿಸಿಕೊಳ್ಳುತ್ತಿರುವುದರಿಂದ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದರಿಂದ ವೈಮಾನಿಕ ಕ್ಷೇತ್ರ ಲಾಭದತ್ತ ಮರಳುತ್ತಿದೆ ಎಂದು ಐಎಟಿಎ ಸಿಇಒ ಗಿಯೊವನ್ನಿ ಬಿಸಿಗ್ನಾನಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ